×
Ad

ದಿಲ್ಲಿ ಅಬಕಾರಿ ನೀತಿ ಪ್ರಕರಣ: ರವಿವಾರ ವಿಚಾರಣೆಗೆ ಹಾಜರಾಗಲು ಸಿಸೋಡಿಯಗೆ ಸಿಬಿಐ ಸಮನ್ಸ್

Update: 2023-02-18 19:09 IST

ಹೊಸದಿಲ್ಲಿ, ಫೆ. 18: ದಿಲ್ಲಿ ಸರಕಾರದ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಗೆ ರವಿವಾರ ಹಾಜರಾಗುವಂತೆ ಕೇಂದ್ರೀಯ ತನಿಖಾ ಮಂಡಳಿ (ಸಿಬಿಐ) (CBI) ಯು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಗೆ (Manish Sisodia) ಸಮನ್ಸ್ ನೀಡಿದೆ.

ವಿಚಾರಣೆಗಳಿಗೆ ನಾನು ಯಾವತ್ತೂ ಸಹಕಾರ ನೀಡಿದ್ದೇನೆ ಹಾಗೂ ಇನ್ನು ಮುಂದೆಯೂ ಹಾಗೆಯೇ ಮಾಡುತ್ತೇನೆ ಎಂಬುದಾಗಿ ಸಿಸೋಡಿಯ ಟ್ವೀಟ್ ಮಾಡಿದ್ದಾರೆ.

‘‘ಸಿಬಿಐ ಮತ್ತು ಅನುಷ್ಠಾನ ನಿರ್ದೇಶನಾಲಯ (ಇಡಿ) ತಮ್ಮ ಪೂರ್ಣ ಶಕ್ತಿಯನ್ನು ನನ್ನ ವಿರುದ್ಧ ಬಳಸಿಕೊಂಡಿವೆ. ಮನೆಯ ಮೇಲೆ ದಾಳಿ ನಡೆಸಿದರು, ಬ್ಯಾಂಕ್ ಲಾಕರ್‌ಗಳಲ್ಲಿ ಶೋಧ ನಡೆಸಿದರು. ನನ್ನ ವಿರುದ್ಧ ಅವರಿಗೆ ಏನೂ ಸಿಕ್ಕಿಲ್ಲ. ನಾನು ದಿಲ್ಲಿಯಲ್ಲಿ ಸ್ಥಾಪಿಸಿರುವ ಶಿಕ್ಷಣ ವ್ಯವಸ್ಥೆಯನ್ನು ಹಾಳುಗೆಡವಲು ಅವರು ಪ್ರಯತ್ನಿಸುತ್ತಿದ್ದಾರೆ’’ ಎಂದು ಸಿಸೋಡಿಯ ಟ್ವಿಟರ್‌ನಲ್ಲಿ ಬರೆದಿದ್ದಾರೆ.

ದಿಲ್ಲಿ ಸರಕಾರದ ನೂತನ ಮದ್ಯ ನೀತಿಯಲ್ಲಿ ಅವ್ಯವಹಾರಗಳು ನಡೆದಿವೆ ಎಂದು ಆರೋಪಿಸಿ ಸಿಬಿಐ ಆಗಸ್ಟ್‌ನಲ್ಲಿ ಸಿಸೋಡಿಯ ಮತ್ತು ಇತರ 14 ಮಂದಿಯ ವಿರುದ್ಧ ಮೊಕದ್ದಮೆ ದಾಖಲಿಸಿತ್ತು. ಆಗಸ್ಟ್ 30ರಂದು ಸಿಬಿಯ ಸಿಸೋಡಿಯ ಮತ್ತು ಇತರ ಆರೋಪಿಗಳ ಕಟ್ಟಡಗಳ ಮೇಲೆ ದಾಳಿ ನಡೆಸಿತ್ತು.

Similar News