×
Ad

ಬಜೆಟ್‌ನಲ್ಲಿ ಅನ್ಯಾಯ ಆರೋಪ: ಸರಕಾರಿ ನೌಕರರಿಂದ ತುರ್ತು ಸಭೆ

Update: 2023-02-19 20:04 IST

ಉಡುಪಿ: ಬಜೆಟ್‌ನಲ್ಲಿ ವೇತನ ಪರಿಷ್ಕರಣೆ ಹಾಗೂ ಎನ್.ಪಿ.ಎಸ್. ರದ್ದತಿ ಕುರಿತು ಸರಕಾರದ ಕ್ರಮ ವಿರೋಧಿಸಿ, ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಜಿಲ್ಲಾ ಸರಕಾರಿ ನೌಕರರ ಸಂಘದಿಂದ ಇಂದು ತುರ್ತು ಸಭೆ ನಡೆಸಲಾಯಿತು.

ಬಜೆಟ್‌ನಲ್ಲಿ ವೇತನ ಪರಿಷ್ಕರಣೆ ಕುರಿತಂತೆ ರಾಜ್ಯದ ಎಲ್ಲಾ ನೌಕರರು ಇಟ್ಟುಕೊಂಡಿದ್ದ ನಿರೀಕ್ಷೆಯನ್ನು ರಾಜ್ಯ ಸರಕಾರ ಹುಸಿಗೊಳಿಸಿದ್ದು, ಇದರಿಂದ ನೌಕರರಲ್ಲಿ ತೀವ್ರ ಅಸಮಧಾನ ಉಂಟಾಗಿದೆ. ಈ ಬಗ್ಗೆ ನಡೆಸಬೇಕಾ ಗಿರುವ  ಮುಂದಿನ ಹೋರಾಟದಲ್ಲಿ ಎಲ್ಲಾ ನೌಕರರು ಸಕ್ರಿಯವಾಗಿ ತೊಡಗಿಸಿಕೊಂಡು, ವೇತನ ಆಯೋಗದ ಸೌಲಭ್ಯಗಳನ್ನು ಪಡೆಯುವವರೆಗೂ ವಿರಮಿಸಬಾರದು ಎಂದು ಅಂಪಾರು ದಿನಕರ ಶೆಟ್ಟಿ ಹೇಳಿದರು.

ಸಭೆಯಲ್ಲಿ ಕಾರ್ಯದರ್ಶಿ ಉದಯ ಕುಮಾರ್ ಶೆಟ್ಟಿ, ಖಜಾಂಚಿ ಶರೀಫ್ ರೋಣ, ಪ್ರೌಡಶಾಲೆ ಶಿಕ್ಷಕರ ಸಂಘದ ಅಧ್ಯಕ್ಷ ಪ್ರಭಾಕರ ಶೆಟ್ಟಿ, ನೌಕರರ ಸಂಘದ ಮಾಜಿ ಅಧ್ಯಕ್ಷ  ಸುಬ್ರಹ್ಮಣ್ಯ ಶೇರಿಗಾರ್ ಹಾಗೂ ಜಿಲ್ಲೆಯ ವಿವಿಧ ಇಲಾಖೆಗಳ ಪ್ರತಿನಿಧಿಗಳು, ವೃಂದ ಸಂಘಟನೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

Similar News