×
Ad

5 ರೂಪಾಯಿಗಾಗಿ ಜಟಾಪಟಿ: ರಣಾಂಗಣವಾದ ತರಕಾರಿ ಮಾರುಕಟ್ಟೆ

Update: 2023-02-20 12:46 IST

ಆಗ್ರಾ: ರೂ. 5 ರೂಪಾಯಿಗಾಗಿ ಎರಡು ಗುಂಪುಗಳ ನಡುವೆ ಜಟಾಪಟಿ ನಡೆದು, ಇಡೀ ತರಕಾರಿ ಮಾರುಕಟ್ಟೆ ರಣಾಂಗಣವಾಗಿರುವ ಘಟನೆ ಆಗ್ರಾದ ಎಟ್ಮಾಡ್‌ಪುರ್‌ನ ಜನನಿಬಿಡ ರಸ್ತೆಯಲ್ಲಿ ಜರುಗಿದೆ.

ಈ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಎರಡು ಗುಂಪಿನ ದುಷ್ಕರ್ಮಿಗಳು ದೊಣ್ಣೆ ಹಿಡಿದುಕೊಂಡು ಪರಸ್ಪರ ಬಡಿದಾಡುತ್ತಿರುವುದು ಕಂಡು ಬಂದಿದೆ‌.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಉತ್ತರ ಪ್ರದೇಶ ಪೊಲೀಸರು, ಆರೋಪಿಗಳ ಪತ್ತೆಗೆ ಶೋಧ ಕೈಗೊಂಡಿದ್ದಾರೆ ಎಂದು ವರದಿಯಾಗಿದೆ.

Similar News