ರಂಗಭೂಮಿ ಅಂತ:ಕರಣ ಅಭಿವ್ಯಕ್ತಿ: ಪ್ರೊ.ಫಣಿರಾಜ್

Update: 2023-02-20 15:35 GMT

ಶಿರ್ವ : ವ್ಯವಸ್ಥೆಯ ವಿರುದ್ಧ ರಾಜಿ ಮಾಡಿಕೊಳ್ಳದೆ ದೃಢವಾಗಿ ನಿಲ್ಲುವ ಇತಿಹಾಸ ಹೊಂದಿರುವ ರಂಗ ಪ್ರಸುತ್ತಿ ಗಳು ಅಂತ:ಕರಣದ ಅಭಿವ್ಯಕ್ತಿಯಾಗಿದೆ ಎಂದು ಚಿಂತಕ ಪ್ರೊ.ಫಣಿರಾಜ್ ಹೇಳಿದ್ದಾರೆ.

ಪಾಂಬೂರು ರಂಗ ಪರಿಚಯ - ಪರಿಚಯ ಬಯಲು ರಂಗಮಂದಿರ ಪ್ರಕೃತಿ  ಯಲ್ಲಿ ಜರಗಿದ ೭ದಿನಗಳ ಕನ್ನಡ, ತುಳು, ಕೊಂಕಣಿ, ಬುಂದೇಲಿ, ಹಿಂದಿ ಭಾಷೆಗಳ ನಾಟಕಗಳ ಪ್ರದರ್ಶನಗಳನ್ನೊಳಗೊಂಡ ರಾಷ್ಟ್ರೀಯ ರಂಗೋತ್ಸವ -೨೦೨೩ ಇದರ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡುತಿದ್ದರು.

ರಂಗಭೂಮಿ ದೇಶೀಯತೆ, ಸಹನಶೀಲತೆಯನ್ನು ಬೆಳೆಸುತ್ತದೆ. ದೇಶೀಯತೆಯ ಸಮಾಗಮ ಇಲ್ಲಿ ಆಗುತ್ತಿದೆ. ನಮ್ಮ ದೇಶಿಯತೆಯನ್ನು ಇತರರಿಗೆ ಪರಿಚಯಿಸು ವುದು, ಹಾಗೂ ಇತರ ದೇಶೀಯತೆಯನ್ನು ನಾವು ಕಲಿಯುತ್ತೇವೆ ಎಂದರು.

ಉಡುಪಿ ಜಿಲ್ಲಾ ಕನ್ನಡ ಮತುತಿ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಮಾತನಾಡಿ, ಮಾನಸಿಕವಾಗಿ ಬದ್ದತೆ ಇರಬೇಕಾದರೆ ಕಲೆ, ಸಂಸ್ಕೃತಿಯ ವಾತಾವರಣ ಇರಬೇಕು. ಸಾಂಸ್ಕೃತಿಕ ಕಾರ್ಯ ಗಳು, ವೈವಿದ್ಯತೆಗಳು ಹೆಚ್ಚಾಗಿ ಇರುವಲ್ಲಿ ಉತ್ತಮ ವಾತಾವರಣ ನಿರ್ಮಾಣ ಆಗುತತಿದೆ ಎಂದರು.  

ಮಂಗಳೂರು ಸೈಂಟ್ ಎಲೋಸಿಯಸ್ ಕಾಲೇಜಿನ ಪ್ರಾಚಾರ್ಯ ವಂ. ಪ್ರವೀಣ್ ಮಾರ್ಟಿಸ್ ಮಾತನಾಡಿದರು. ಅಧ್ಯಕ್ಷತೆಯನ್ನು ಪರಿಚಯ ಪ್ರತಿಷ್ಠಾನ ಪಾಂಬೂರು ಅಧ್ಯಕ್ಷ ಅನಿಲ್ ಡೇಸಾ  ವಹಿಸಿದ್ದರು.

ಸಂಸ್ಥೆಯ ಆಡಳಿತ ಟ್ರಸ್ಟಿ ಡಾ.ವಿನ್ಸೆಂಟ್ ಆಳ್ವ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕೋಶಾಧಿಕಾರಿ ಐವನ್ ಪೀಟರ್ ವೊಸ್ಟಾ ದಾನಿಗಳನ್ನು ಪರಿಚಯಿಸಿದರು. ಟ್ರಸ್ಟಿಗಳಾದ ಇಗ್ನೇಷಿಯಸ್ ಡಿಸೋಜ, ಲೂಕಾಸ್ ಡಿಸೋಜ ದಾನಿಗಳನ್ನು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಪರಿಚಯ ಬಯಲು ರಂಗಮಂದಿರ ನಿರ್ಮಾಣಕ್ಕೆ ಸ್ಥಳದಾನ ಮಾಡಿದ ಮೇರಿ ನೊರೋನ್ಹಾ ಅವರನ್ನು ಸನ್ಮಾನಿಸಲಾಯಿತು. ರಂಗ ನಿರ್ದೇಶಕ ಮಹಾದೇವ ಹಡಪದ ಅವರನ್ನು ಟ್ರಸ್ಟಿ ಬಿ.ಪುಂಡಲೀಕ ಮರಾಠೆ ಸನ್ಮಾನಿಸಿದರು. ಟ್ರಸ್ಟಿ ಸರಿತಾ ಆಳ್ವ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಕಾರ್ಯದರ್ಶಿ ಪ್ರಕಾಶ್ ನೊರೋನ್ಹಾ ವಂದಿಸಿದರು. ಧಾರವಾಡ ಆಟಮಾಟ ಸಾಂಸ್ಕೃತಿಕ ಪಥ ತಂಡದಿಂದ ‘ಗುಡ್ಡದ ಹಾಡು’ ಕನ್ನಡ ನಾಟಕ ಪ್ರದರ್ಶನ ಗೊಂಡಿತು. 

Similar News