ಅಮಿತ್ ಶಾ ಮಹಾರಾಷ್ಟ್ರದ ನಂ. 1 ಶತ್ರು: ಸಾಮ್ನಾ

Update: 2023-02-21 04:53 GMT

ಮುಂಬೈ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಮಹಾರಾಷ್ಟ್ರದ ನಂ. 1 ವೈರಿ ಎಂದು ಶಿವಸೇನೆ (ಯುಬಿಟಿ) ಮುಖವಾಣಿ ’ಸಾಮ್ನಾ’ ತನ್ನ ಸಂಪಾದಕೀಯದಲ್ಲಿ ಬಣ್ಣಿಸಿದೆ.

"ಶಿವಸೇನೆಯ ಹೆಸರು ಮತ್ತು ಚಿಹ್ನೆಯನ್ನು ಖರೀದಿಸಿದ ಬಳಿಕ, ಬಿಜೆಪಿ ತನ್ನ ಕಾಲು ಸೋಲುವವರೆಗೂ ನೃತ್ಯ ಮಾಡಿದೆ. ಶಿಂಧೆ ಬಣಕ್ಕಿಂತ ಹೆಚ್ಚು ಸಂತೋಷ ಆಗಿರುವುದು ಬಿಜೆಪಿಗೆ. ಜನ ಅಂಗಡಿಯಿಂದ ಕಡಲೆಕಾಳು ಅಥವಾ ಶೇಂಗಾ ಖರೀದಿಸುವಂತೆ ಪಕ್ಷದ ಹೆಸರು ಮತ್ತು ಚಿಹ್ನೆಯ ಆದೇಶ ಪಡೆದಿದೆ ಎನ್ನುವುದು ರಹಸ್ಯವೇನಲ್ಲ" ಎಂದು ವಿವರಿಸಿದೆ.

ಶಿಂಧೆ ಬಣಕ್ಕೆ ಶಿವಸೇನೆಯ ಹೆಸರು ಮತ್ತು ಬಿಲ್ಲು-ಬಾಣ ಸಿಕ್ಕಿರುವ ಬಗ್ಗೆ ಶಿವಾಜಿ ಜಯಂತಿಗೆ ಆಗಮಿಸಿದ ಅಮಿತ್ ಶಾ ಸಂತಸ ವ್ಯಕ್ತಪಡಿಸಿದ್ದರು. ಶಿಂದೆ ಅಮಿತ್ ಶಾ ಅವರ ಕೃಪೆಯಿಂದ ಬಿಲ್ಲು ಬಾಣ ಪಡೆದಿದ್ದಾರೆ. ಅಮಿತ್ ಶಾ ಮಹಾರಾಷ್ಟ್ರ ಹಾಗೂ ಮರಾಠಿ ಜನರ ನಂಬರ್ ವನ್ ಶತ್ರು. ಆದ್ದರಿಂದ ತಮ್ಮ ರಾಜಕೀಯ ಆಕಾಂಕ್ಷೆಗಳನ್ನು ಶಾ ಅವರ ನೆರಳಿನಲ್ಲಿ ಹೊಂದಿರುವ ಎಲರನ್ನೂ ಮಹಾರಾಷ್ಟ್ರದ ಶತ್ರುಗಳು ಎಂದು ಪರಿಗಣಿಸಬೇಕಾಗುತ್ತದೆ ಎಂದು ವಿವರಿಸಲಾಗಿದೆ.

Similar News