ಮಣಿಪಾಲ | ಮಾದಕ ವಸ್ತು ಮಾರಾಟ: ಆರೋಪಿಯ ಬಂಧನ, ಸೊತ್ತು ವಶ
Update: 2023-02-22 12:12 IST
ಮಪಾಲ, ಫೆ.22: ದ್ವಿಚಕ್ರ ವಾಹನದಲ್ಲಿ ತಂದು ಮಾದಕವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಓರ್ವನನ್ನು ಮಣಿಪಾಲ ಪೊಲೀಸರು ಮಂಗಳವಾರ ಬೆಳಗ್ಗೆ ಮಣಿಪಾಲದ ಆರ್‌ಟಿಓ ಕಚೇರಿ ಬಳಿ ಬಂಧಿಸಿದ್ದಾರೆ.
ಉಡುಪಿ ಕೊರಂಗ್ರಪಾಡಿ ನಿವಾಸಿ ಇಕ್ಬಾಲ್ ಶೇಕ್(32) ಬಂಧಿತ ಆರೋಪಿ. ಈತನ ವಶದಲ್ಲಿದ್ದ 136 ಗ್ರಾಂ ಗಾಂಜಾ, 0.36 ಗ್ರಾಂ ಎಂಡಿಎಂಎ, ಮೊಬೈಲ್ ಫೋನ್, ವೈಫೈ ರೂಟರ್, ದ್ವಿಚಕ್ರ ವಾಹನ ಹಾಗೂ ನಗದು ವಶಪಡಿಸಿಕೊಳ್ಳಲಾಗಿದೆ. ಅವುಗಳ ಒಟ್ಟು ಮೌಲ್ಯ 44,700 ರೂ. ಎಂದು ಅಂದಾಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.