×
Ad

ಸ್ವಯಂಸೇವಕರ ಹುದ್ದೆ: ಅರ್ಜಿ ಆಹ್ವಾನ

Update: 2023-02-22 21:06 IST

ಉಡುಪಿ, ಫೆ.22: ಕೇಂದ್ರ ಸರಕಾರದ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯದ ನೆಹರು ಯುವಕೇಂದ್ರದ ವತಿಯಿಂದ ರಾಷ್ಟ್ರೀಯ ಯುವ ಸ್ವಯಂಸೇವಕರ ನೇಮಕಾತಿಗೆ ಜಿಲ್ಲೆಯ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. 

ಅಭ್ಯರ್ಥಿಗಳು ಕನಿಷ್ಠ ಎಸೆಸೆಲ್ಸಿ ಉತ್ತೀರ್ಣರಾಗಿದ್ದು, 18-29 ವರ್ಷ ವಯೋಮಿತಿಯೊಳಗಿರಬೇಕು. ಹಾಗೂ ಯಾವುದೇ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಾಗಿರಬಾರದು. ಅರ್ಜಿ ಸಲ್ಲಿಸಲು ಮಾರ್ಚ್ 9 ಕೊನೆಯ ದಿನ. 
ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್ -ತಿತಿತಿ.ಟಿಥಿಞs.ಟಿiಛಿ.iಟಿ- ಅಥವಾ ಜಿಲ್ಲಾ ಯುವಜನ ಅಧಿಕಾರಿಗಳು, ನೆಹರು ಯುವ ಕೇಂದ್ರ, ರಜತಾದ್ರಿ, ಜಿಲ್ಲಾಧಿಕಾರಿ ಕಚೇರಿ ಆವರಣ, ಮಣಿಪಾಲ, ಉಡುಪಿ, ದೂ.ಸಂಖ್ಯೆ: 0820-2574992ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಯುವಜನ ಅಧಿಕಾರಿಗಳ ಪ್ರಕಟಣೆ ತಿಳಿಸಿದೆ.

Similar News