ಪರ್ಯಾಯ ವಸತಿ ಒದಗಿಸಲು ಸಾಧ್ಯವಿಲ್ಲದಿದ್ದರೆ ತಾಜ್ ಹೋಟೆಲ್‌ನಲ್ಲಿರಿಸಿ: MMRDAಗೆ ಹೈಕೋರ್ಟ್ ತರಾಟೆ
ಪರ್ಯಾಯ ವಸತಿ ಸೌಕರ್ಯ ಒದಗಿಸದೆ 48 ಗಂಟೆಗಳೊಳಗೆ ಮನೆ ತೆರವುಗೊಳಿಸಬೇಕೆಂದಿದ್ದ ಪ್ರಾಧಿಕಾರ
ಮುಂಬೈ: ವ್ಯಕ್ತಿಯೊಬ್ಬನಿಗೆ ಪರ್ಯಾಯ ವಸತಿ ಸೌಕರ್ಯ ಒದಗಿಸದೆ ಕೇವಲ 48 ಗಂಟೆಗಳೊಳಗೆ ತಾನಿರುವ ಮನೆಯನ್ನು ತೆರವುಗೊಳಿಸಬೇಕೆಂದು ನೋಟಿಸ್ ಜಾರಿಗೊಳಿಸಿದ ಮುಂಬೈ ಮೆಟ್ರೋಪಾಲಿಟನ್ ಅಭಿವೃದ್ಧಿ ಪ್ರಾಧಿಕಾರ - ಎಂಎಂಆರ್‌ಡಿಎ ಅನ್ನು ಬಾಂಬೆ ಹೈಕೋರ್ಟ್ ಬುಧವಾರ ತರಾಟೆಗೆ ತೆಗೆದುಕೊಂಡಿದೆ.
"ಅರ್ಜಿದಾರರು ಮತ್ತಿನ್ನೇನು ಮಾಡಬೇಕು(ನ್ಯಾಯಾಲಯದ ಕದ ತಟ್ಟದೆ)? ಫ್ಲೋರಾ ಫೌಂಟೇನ್ ಸಮೀಪ ಭಿಕ್ಷೆ ಬೇಡುವುದೇ? ಅವರಿಗೆ ಪರ್ಯಾಯ ವಸತಿ ಸೌಲಭ್ಯ ಒದಗಿಸಲು ಸಾಧ್ಯವಿಲ್ಲವೆಂದಾದರೆ, ತಾಜ್ ಹೋಟೆಲ್‌ನಲ್ಲಿರಿಸಿ ಅವರು ಅಲ್ಲಿ ಉಳಿಯುತ್ತಾರೆ, ತಾಜ್ ಹೋಟೆಲ್ ಎಂದು ಹೇಳುವಾಗ ನಾವು ಹಳೆಯ ತಾಜ್ ಹೋಟೆಲ್ ಉಲ್ಳೇಖಿಸುತ್ತಿದ್ದೇವೆ," ಎಂದು ನ್ಯಾಯಮೂರ್ತಿಗಳಾದ ಜಿ ಎಸ್ ಪಟೇಲ್ ಮತ್ತು ನೀಲಾ ಗೋಖಲೆ ಅವರನ್ನೊಳಗೊಂಡ ಪೀಠ ಹೇಳಿದೆ.
ತಾನು ಕುಟುಂಬದೊಂದಿಗೆ ವಾಸವಿದ್ದ ಫ್ಲ್ಯಾಟ್‌ಗೆ ಎಎಂಆರ್‌ಡಿಎ ಬೀಗ ಜಡಿದಿದೆ ಎಂದು ಆರೋಪಿಸಿ ಸಂತ್ರಸ್ತ ಶೋಭನಾಥ್ ಸಿಂಗ್ ನ್ಯಾಯಾಲಯದ ಕದ ತಟ್ಟಿದ್ದರು.
ಫೆಬ್ರವರಿ 8ರಂದು ಜಾರಿಯಾದ ನೋಟಿಸಿನಲ್ಲಿ ಫ್ಲ್ಯಾಟ್ ತೆರವುಗೊಳಿಸದೇ ಇದ್ದಲ್ಲಿ ಬಲವಂತವಾಗಿ ತೆರವುಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿತ್ತು.
ತಾನು 2017ರ ತನಕ ಬೇರೊಂದು ಸ್ಥಳದಲ್ಲಿ ವಾಸವಾಗಿದ್ದೆ. ಆದರೆ ಅಲ್ಲಿ ಕೊಳೆಗೇರಿ ಪುನರ್ವಸತಿ ಯೋಜನೆ ಹಾಗೂ ಭೂಗತ ನೀರಿನ ಟ್ಯಾಂಕ್ ತಮ್ಮ ನಿವಾಸದ ಸಮೀಪ ಇರುವುದರಿಂದ ಆ ಸ್ಥಳವನ್ನು ಬಿಡುವಂತೆ ಸ್ಪರ್ಕ್ ಸಮುದಾಯ ನಿರ್ಮಾಣ್ ಎಂಬ ಸಂಸ್ಥೆ ಕೋರಿ ಆ ಯೋಜನೆ ಪೂರ್ಣಗೊಳ್ಳುವ ತನಕ ಪರ್ಯಾಯ ಮನೆಯಲ್ಲಿ ವಾಸಿಸುವಂತೆ ಸೂಚಿಸಲಾಗಿತ್ತು ಆ ವಸತಿ ಸೌಕರ್ಯವೇ ಈಗಿರುವ ಮನೆ ಎಂದು ಅರ್ಜಿದಾರರು ಹೇಳಿದ್ದರು.