×
Ad

ಪಡುಬಿದ್ರೆ | ಪತಿಯ ಕಿರುಕುಳ ಆರೋಪ: ಪತ್ನಿ ಆತ್ಮಹತ್ಯೆ

Update: 2023-02-24 10:40 IST

ಪಡುಬಿದ್ರೆ, ಫೆ.24: ಮಹಿಳೆಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪಡುಬಿದ್ರೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪತಿಯ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇಲ್ಲಿನ ಬೋಳಾರ ನಿವಾಸಿ ಮಮತಾ(42) ಎಂದು ಗುರುತಿಸಲಾಗಿದೆ. ಪಡುಬಿದ್ರೆ ಬೀಡು ನಿವಾಸಿ ಚೇತನ್ ಎಂಬಾತನೊಂದಿಗೆ 2011ರಲ್ಲಿ ಇವರ ವಿವಾಹ ನಡೆದಿತ್ತು. ಚೇತನ್ ಪತ್ನಿಗೆ ದೈಹಿಕ, ಮಾನಸಿಕ ಕಿರುಕುಳ ನೀಡುತ್ತಿರುವುದಾಗಿ ಪೊಲೀಸ್ ದೂರಿನಲ್ಲಿ ಆರೋಪಿಸಲಾಗಿದೆ.

 ಹೊಟೇಲ್ ವ್ಯವಹಾರ ನಡೆಸುತ್ತಿದ್ದ ಚೇತನ್ ತನಗೆ ಹಣ ನೀಡುವಂತೆ ದೈಹಿಕ  ಹಾಗೂ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದ ಎಂದು ಮಮತಾ ತನ್ನ ಸಹೋದರನಿಗೆ ತಿಳಿಸಿದ್ದರು. ಈ ವೇಳೆ ಅವರನ್ನು ಸಹೋದರ ಸಮಾಧಾನಪಡಿಸಿ ಕಳುಹಿಸಿದ್ದರು ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.

ಪತಿಯ ಕಿರುಕುಳದಿಂದಲೇ ಮಮತಾ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

Similar News