×
Ad

ಸ್ಥಾಯಿ ಸಮಿತಿ ಚುನಾವಣೆಗೆ ಮೊದಲು ಬಿಜೆಪಿಗೆ ಸೇರ್ಪಡೆಯಾದ ದಿಲ್ಲಿ ಎಎಪಿ ಕೌನ್ಸಿಲರ್ ಪವನ್ ಸೆಹ್ರಾವತ್

Update: 2023-02-24 10:52 IST

ಹೊಸದಿಲ್ಲಿ: ಸ್ಥಾಯಿ ಸಮಿತಿ ಚುನಾವಣೆಗೆ ಕೆಲವೇ ನಿಮಿಷಗಳಿರುವಾಗ ಶುಕ್ರವಾರ ದಿಲ್ಲಿಯ ಕೌನ್ಸಿಲರ್ ಪವನ್ ಸೆಹ್ರಾವತ್  ಆಮ್ ಆದ್ಮಿ ಪಕ್ಷವನ್ನು ತೊರೆದು ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೇರಿದ್ದಾರೆ. ಆಮ್ ಆದ್ಮಿ ಪಕ್ಷದಲ್ಲಿನ ಭ್ರಷ್ಟಾಚಾರದಿಂದಾಗಿ ತನಗೆ "ಉಸಿರುಗಟ್ಟುವಂತಾಗಿತ್ತು'' ಎಂದು ಸೆಹ್ರಾವತ್ ಆರೋಪಿಸಿದ್ದಾರೆ.

ಬವಾನಾ ವಾರ್ಡ್ ನ ಎಎಪಿ ಕೌನ್ಸಿಲರ್ ಸೆಹ್ರಾವತ್ ಅವರನ್ನು ಪಕ್ಷದ ದಿಲ್ಲಿ ಘಟಕದ ಕಚೇರಿಯಲ್ಲಿ ಕಾರ್ಯಾಧ್ಯಕ್ಷ ವೀರೇಂದ್ರ ಸಚ್‌ದೇವ ಹಾಗೂ  ಪ್ರಧಾನ ಕಾರ್ಯದರ್ಶಿ ಹರ್ಷ್ ಮಲ್ಹೋತ್ರಾ ಬಿಜೆಪಿಗೆ ಸ್ವಾಗತಿಸಿದರು.

ಸ್ಥಾಯಿ ಸಮಿತಿಗೆ ಆರು ಸದಸ್ಯರ ಚುನಾವಣೆಯ ಸಂದರ್ಭದಲ್ಲಿ ದಿಲ್ಲಿ  ಮಹಾನಗರ ಪಾಲಿಕೆ ಸೆಂಟರ್‌ನಲ್ಲಿ ಮಧ್ಯರಾತ್ರಿಯಲ್ಲಿ ಗೊಂದಲ ಉಂಟಾದ ಕೆಲವೇ ಗಂಟೆಗಳ ನಂತರ ಆಮ್ ಆದ್ಮಿ ಪಕ್ಷ ನಾಯಕ ಬಿಜೆಪಿಗೆ ಸೇರಿದ್ದಾರೆ.

Similar News