×
Ad

ಛತ್ತೀಸ್‌ಗಢ: ಪಿಕಪ್ ವಾಹನ- ಟ್ರಕ್‌ ಮುಖಾಮುಖಿ ಢಿಕ್ಕಿ, ಕನಿಷ್ಠ 11 ಮಂದಿ ಮೃತ್ಯು

Update: 2023-02-24 11:22 IST

ರಾಯಪುರ: ಛತ್ತೀಸ್‌ಗಢದ ಬಲೋಡಾ ಬಝಾರ್ ಜಿಲ್ಲೆಯಲ್ಲಿ ಪಿಕಪ್ ವಾಹನ  ಹಾಗೂ ಟ್ರಕ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಕನಿಷ್ಠ ಹನ್ನೊಂದು ಜನ ಸಾವನ್ನಪ್ಪಿದ್ದಾರೆ ಹಾಗೂ  ಹಲವಾರು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

"ಪಿಕಪ್ ವಾಹನವು ಟ್ರಕ್‌ಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಭಟಪಾರಾ (ಗ್ರಾಮೀಣ) ಪೊಲೀಸ್ ಠಾಣಾ ವ್ಯಾಪ್ತಿಯ ಖಮರಿಯಾ ಗ್ರಾಮದಲ್ಲಿ ಈ ಘಟನೆ ನಡೆದಿದೆ" ಎಂದು ಭಟಪಾರಾ ಉಪವಿಭಾಗೀಯ ಪೊಲೀಸ್ ಅಧಿಕಾರಿ (ಎಸ್‌ಡಿಒಪಿ) ಸಿದ್ಧಾರ್ಥ ಬಘೇಲ್ ತಿಳಿಸಿದ್ದಾರೆ.

ಎಸ್‌ಡಿಒಪಿ ಪ್ರಕಾರ, ಪಿಕಪ್ ವಾಹನವು ಕಾರ್ಯಕ್ರಮದಿಂದ ಹಿಂತಿರುಗುತ್ತಿದ್ದಾಗ ಅರ್ಜುನಿಯಲ್ಲಿ ಟ್ರಕ್‌ಗೆ ಡಿಕ್ಕಿ ಹೊಡೆದು 11 ಜನರು ಸಾವನ್ನಪ್ಪಿದರು ಹಾಗೂ  ಸುಮಾರು ಎಂಟು ಜನರು ಗಾಯಗೊಂಡರು.

ಸ್ಥಳೀಯರ ಸಹಾಯದಿಂದ ಗಾಯಾಳುಗಳನ್ನು ತಕ್ಷಣ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವರಲ್ಲಿ ಕೆಲವರನ್ನು ಉತ್ತಮ ವೈದ್ಯಕೀಯ ನೆರವಿಗಾಗಿ ರಾಯ್‌ಪುರಕ್ಕೆ ಕಳುಹಿಸಲಾಗಿದೆ ಎಂದು ಅಧಿಕಾರಿ ಹೇಳಿದರು.

Similar News