×
Ad

ಹೈದರಾಬಾದ್: ಜಿಮ್ ಮಾಡುತ್ತಿದ್ದಾಗಲೇ ಹೃದಯಾಘಾತದಿಂದ ಮೃತಪಟ್ಟ 24 ವರ್ಷದ ಪೊಲೀಸ್ ಪೇದೆ

Update: 2023-02-24 13:23 IST

ಹೈದರಾಬಾದ್ : ಹೈದರಾಬಾದ್‌ನ ಜಿಮ್‌ನಲ್ಲಿ ಗುರುವಾರ ತಾಲೀಮು ನಡೆಸುತ್ತಿದ್ದಾಗಲೇ  24 ವರ್ಷದ ಪೊಲೀಸ್ ಪೇದೆಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ಆಘಾತಕಾರಿ ಘಟನೆ ವರದಿಯಾಗಿದೆ.

ಕಾನ್‌ಸ್ಟೇಬಲ್ ವಿಶಾಲ್ ಬೋವನಪಲ್ಲಿ ನಿವಾಸಿಯಾಗಿದ್ದು, ಆಸಿಫ್ ನಗರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿರುವ ವೀಡಿಯೊದಲ್ಲಿ ವಿಶಾಲ್ ಪುಷ್-ಅಪ್ ಮಾಡುತ್ತಿರುವುದು ಕಂಡು ಬಂದಿದೆ. ತನ್ನ ಸೆಟ್ ಅನ್ನು ಮುಗಿಸಿದ ನಂತರ, ಅವರು ಇನ್ನೊಂದು ಪ್ರದೇಶಕ್ಕೆ ತೆರಳುತ್ತಾರೆ. ಮುಂದಕ್ಕೆ ವಾಲುತ್ತಿರುವಾಗ ಕೆಮ್ಮುವುದು ಕಂಡುಬಂದಿದೆ.

ವಿಶಾಲ್ ಹತ್ತಿರದ ಜಿಮ್ ಯಂತ್ರವನ್ನು ಹಿಡಿದುಕೊಳ್ಳುತ್ತಾರೆ.  ಆದರೆ ಅವರ ಕೆಮ್ಮು ಹೆಚ್ಚಾಗುತ್ತದೆ. ಸ್ವಲ್ಪ ಸಮಯದ ನಂತರ ಅವರು ನೆಲದ ಮೇಲೆ ಕುಳಿತು ಕುಸಿದು ಬೀಳುತ್ತಾರೆ.

ನೆಲದ ಮೇಲೆ ಬಿದ್ದಿರುವ ಯುವಕನಿಗೆ ಸಹಾಯ ಮಾಡಲು ಇತರರು ಧಾವಿಸುತ್ತಾರೆ. ಈ ಘಟನೆ ಜಿಮ್‌ನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಮಯ ರಾತ್ರಿ 8.04 ಎಂದು ತೋರಿಸುತ್ತಿದೆ.

ಅವರ ಜಿಮ್ ಮೇಟ್‌ಗಳು ವಿಶಾಲ್‌ನನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ವೈದ್ಯರು ವಿಶಾಲ್ ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು.

Similar News