×
Ad

ದಾರಿ ತಪ್ಪಿಸುವ ಪತಂಜಲಿ ಜಾಹೀರಾತುಗಳ ವಿರುದ್ಧ ಕ್ರಮ ಕೈಗೊಳ್ಳಲು ಕೇಂದ್ರದ ಅನುಮತಿ

Update: 2023-02-24 14:02 IST

ಹೊಸದಿಲ್ಲಿ: ನಿಲುವು ಬದಲಿಸಿದ್ದ ಮತ್ತು ಮಾಹಿತಿ ಹಕ್ಕು ಅರ್ಜಿಗಳನ್ನು ನಿರ್ಲಕ್ಷ್ಯ ಮಾಡಿದ್ದ ಕೇಂದ್ರ ಆಯುಷ್ ಸಚಿವಾಲಯವು, ಕೊನೆಗೂ ಉದ್ಯಮಿ ರಾಮದೇವ್ ಒಡೆತನದ ಪತಂಜಲಿ ಆಯುರ್ವೇದ್ ವಿರುದ್ಧ ತನ್ನ ಉತ್ಪನ್ನಗಳ ಕುರಿತು ದಾರಿ ತಪ್ಪಿಸುವ ಜಾಹೀರಾತು ನೀಡಿದ್ದಕ್ಕಾಗಿ ಕ್ರಮ ಕೈಗೊಳ್ಳಲು ಉತ್ತರಾಖಂಡ ಸರ್ಕಾರಕ್ಕೆ ಅನುಮತಿ ನೀಡಿದೆ ಎಂದು newindianexpress.com ವರದಿ ಮಾಡಿದೆ.

ಸಂಸದ ಕಾರ್ತಿ ಪಿ. ಚಿದಂಬರಂ ದೂರನ್ನು ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದೆ. ಈ ಸಂಬಂಧ ಕಾರ್ತಿ ಪಿ. ಚಿದಂಬರಂಗೆ ಪತ್ರ ಬರೆದಿರುವ ಕೇಂದ್ರ ಆಯುಷ್ ಸಚಿವ ಸರ್ಬಾನ್ನಂದ ಸೋನೊವಾಲ್, "ಮಾದಕ ದ್ರವ್ಯಗಳು ಮತ್ತು ಪವಾಡಸದೃಶ ಪರಿಹಾರ (ಆಕ್ಷೇಪಾರ್ಹ ಜಾಹೀರಾತುಗಳು) ಕಾಯ್ದೆ, 1954 ಹಾಗೂ ಅದರಡಿಯ ನಿಯಮಗಳನ್ವಯ ರಾಜ್ಯ ಪರವಾನಗಿ ಪ್ರಾಧಿಕಾರಕ್ಕೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ" ಎಂದು ತಿಳಿಸಿದ್ದಾರೆ.

ಪತಂಜಲಿ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯ ಪರವಾನಗಿ ಪ್ರಾಧಿಕಾರಕ್ಕೆ ಕೇಂದ್ರ ಆಯುಷ್ ಸಚಿವಾಲಯ ಸೂಚನೆ ನೀಡುತ್ತಿರುವುದು ಇದೇ ಮೊದಲಲ್ಲ. ಆದರೆ, ಫೆಬ್ರವರಿ 10ರ ತನ್ನ ಪತ್ರದಲ್ಲಿ ಕಣ್ಣೂರು ಮೂಲದ ಮಾಹಿತಿ ಹಕ್ಕು ಕಾರ್ಯಕರ್ತ ಹಾಗೂ ನೇತ್ರ ತಜ್ಞ ಕೆ.ವಿ. ಬಾಬು ಅವರು ಪತಂಜಲಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮನವಿ ಸಲ್ಲಿಸಿದಾಗ, ಇದೇ ಮೊದಲ ಬಾರಿಗೆ ನಿಯಮ 170 ಅನ್ನು ಮುಂಬೈ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದ್ದು, ಈ ನಿಂದನೆಯಾಗುತ್ತದೆಯೆಂದೂಹಿನ್ನೆಲೆಯಲ್ಲಿ ಮಾದಕ ದ್ರವ್ಯಗಳು ಮತ್ತು ಪವಾಡಸದೃಶ ಪರಿಹಾರ (ಆಕ್ಷೇಪಾರ್ಹ ಜಾಹೀರಾತುಗಳು) ಕಾಯ್ದೆ, 1954ರ ಅಡಿಯಲ್ಲಿ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲವೆಂದೂ, ಹಾಗೆ ಮಾಡುವುದರಿಂದ ನ್ಯಾಯಾಂಗ  ಕಾರಣ ನೀಡಿ, ಅವರ ಅರ್ಜಿಯನ್ನು ವಜಾಗೊಳಿಸಿತ್ತು.

ಆದರೆ, ಈ ಬಾರಿ ಆಯುಷ್ ಸಚಿವಾಲಯವು ಆರೋಪದ ಕುರಿತು ತನಿಖೆ ನಡೆಸಬೇಕು ಮತ್ತು ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಪರವಾನಗಿ ಪ್ರಾಧಿಕಾರಕ್ಕೆ ಸೂಚಿಸಿದೆ. ಇದಕ್ಕೆ ಪ್ರತಿಯಾಗಿ ಮಾಹಿತಿ ಹಕ್ಕು ಕಾರ್ಯಕರ್ತ ಡಾ. ಬಾಬು, "ನಾನು ಈ ನಿರ್ಧಾರ ಮತ್ತು ಸಂವಹನವನ್ನು ಸ್ವಾಗತಿಸುತ್ತೇನೆ" ಎಂದು ಹೇಳಿದ್ದಾರೆ.

ಇದನ್ನೂ ಓದಿ: ಚೀನಾದೊಂದಿಗಿನ ಆಮದು-ರಫ್ತು ಅಸಮತೋಲನಕ್ಕೆ ಕಾರ್ಪೊರೇಟ್‌ಗಳೂ ಜವಾಬ್ದಾರಿ ಹೊರಬೇಕು: ಜೈಶಂಕರ್‌

Similar News