×
Ad

ಚೀನಾದೊಂದಿಗಿನ ಆಮದು-ರಫ್ತು ಅಸಮತೋಲನಕ್ಕೆ ಕಾರ್ಪೊರೇಟ್‌ಗಳೂ ಜವಾಬ್ದಾರಿ ಹೊರಬೇಕು: ಜೈಶಂಕರ್‌

Update: 2023-02-24 14:07 IST

ಹೊಸದಿಲ್ಲಿ: ಚೀನಾ ಜೊತೆಗಿನ ಆಮದು-ರಫ್ತು ವಹಿವಾಟಿನಲ್ಲಿರುವ ಅಸಮತೋಲನದ ಜವಾಬ್ದಾರಿಯನ್ನು ಭಾರತದ ಕಾರ್ಪೊರೇಟ್‌ ವಲಯ ಕೂಡ ಹೊರಬೇಕು ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌ ಜೈಶಂಕರ್‌ ಹೇಳಿದ್ದಾರೆ.

ವಿದೇಶಾಂಗ ಸಚಿವಾಲಯದ ವಾರ್ಷಿಕ ಏಷ್ಯಾ ಇಕನಾಮಿಕ್‌ ಡೈಲಾಗ್‌  ಅನ್ನು ಉದ್ದೇಶಿಸಿ ಅವರು ಗುರುವಾರ ಮಾತನಾಡುತ್ತಿದ್ದರು. ಚೀನಾ ಜೊತೆಗಿನ ವ್ಯಾಪಾರ ವಹಿವಾಟು ಅಸಮತೋಲನ ಒಂದು ಗಂಭೀರ ವಿಚಾರ ಎಂದೂ ಅವರು ಹೇಳಿದ್ದಾರೆ.

"ಭಾರತೀಯ ಕಾರ್ಪೊರೇಟ್‌ಗಳು ಪೂರೈಕೆಗಳು, ಕಾಂಪೊನೆಂಟ್‌ಗಳು, ಬಿಡಿ ಭಾಗಗಳು ಮುಂತಾದ ವಸ್ತುಗಳೊಂದಿಗೆ ನಮ್ಮನ್ನು ಬೆಂಬಲಿಸಬೇಕಿದ್ದರೂ ಅವುಗಳನ್ನು ಅಭಿವೃದ್ಧಿಗೊಳಿಸಿಲ್ಲ,"ಎಂದು ಜೈಶಂಕರ್‌ ಹೇಳಿದರು.

ಚೀನಾದೊಂದಿಗಿನ ವ್ಯಾಪಾರ ವಹಿವಾಟು ಕೊರತೆಯು ಗರಿಷ್ಠ ಮಟ್ಟದಲ್ಲಿರುವಾಗ ಈ ಹೇಳಿಕೆ ಸಚಿವರಿಂದ ಬಂದಿದೆ. 2022 ರಲ್ಲಿ ಚೀನಾದಿಂದ ಭಾರತದ ಆಮದು ಗರಿಷ್ಠವಾಗಿತ್ತು ಹಾಗೂ ಆಮದು, ರಫ್ತು ನಡುವಿನ ಅಂತರ 100 ಬಿಲಿಯನ್‌ ಡಾಲರ್‌ ಗಡಿಯನ್ನು ಮೊದಲ ಬಾರಿಗೆ ದಾಟಿತ್ತು.

ಕಳೆದ ವರ್ಷ ಚೀನಾದಿಂದ ಭಾರತಕ್ಕೆ ರಫ್ತು ಅದಕ್ಕೂ ಹಿಂದಿನ ವರ್ಷಕ್ಕೆ ಹೋಲಿಸಿದಾಗ ಶೇ 22 ರಷ್ಟು ಏರಿಕೆಯಾಗಿತ್ತು. ಅದೇ ಸಮಯ ಭಾರತದಿಂದ ಚೀನಾದ ಆಮದು 17.5 ಬಿಲಿಯನ್‌ ಡಾಲರ್‌ನಷ್ಟು ಇಳಿಕೆಯಾಗಿ ಇಳಿಕೆಯಾದ ಪ್ರಮಾಣ ಶೇ 38 ಆಗಿತ್ತು. ಭಾರತ ಚೀನಾ ನಡುವಿನ ಗಡಿ ವಿವಾದದ ಹೊರತಾಗಿಯೂ ಚೀನಾದಿಂದ ಭಾರತದ ಆಮದು ಪ್ರಮಾಣ ಹೆಚ್ಚಾಗುತ್ತಲೇ ಇದೆ.

Similar News