10 ನಿಮಿಷ ತಡವಾಗಿ ಆಗಮಿಸಿದ್ದಕ್ಕೆ ಭೂಸ್ಪರ್ಶ ಮಾಡಲು ನಿರಾಕರಣೆ: ಬಂದಿದ್ದ ನಿಲ್ದಾಣಕ್ಕೆ ವಾಪಸಾದ ವಿಮಾನ
ಟೋಕಿಯೊ: ನಿಗದಿತ ಅವಧಿಗಿಂತ ಹತ್ತು ನಿಮಿಷ ತಡವಾಗಿ ಆಗಮಿಸಿದ್ದಕ್ಕಾಗಿ 335 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಜಪಾನ್ ಏರ್‌ಲೈನ್ಸ್ ವಿಮಾನವೊಂದಕ್ಕೆ ಭೂಸ್ಪರ್ಶ ಮಾಡಲು ಅವಕಾಶ ನಿರಾಕರಿಸಿ, ಮರಳಿ ವಾಪಸು ಕಳಿಸಿರುವ ಘಟನೆ ಇತ್ತೀಚೆಗೆ ನಡೆದಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ವಿಮಾನವು ಟೋಕಿಯೊದ ಹನೇಡಾ ವಿಮಾನ ನಿಲ್ದಾಣದಿಂದ ಫುಕುವೊಕೊ ವಾಸ ಸ್ಥಳವಾದ ಹಕಾಟಾ-ಕುವಿನ ಫುಕುವೊಕೊ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುತ್ತಿತ್ತು. ಫೆಬ್ರವರಿ 19ರಂದು 6.30ಕ್ಕೆ ವಿಮಾನ ನಿಲ್ದಾಣದಿಂದ ನಿರ್ಗಮಿಸಬೇಕಿದ್ದ ಈ ವಿಮಾನವು 8 ನಿಮಿಷ ತಡವಾಗಿ ಪ್ರಯಾಣ ಬೆಳೆಸಿತ್ತು. ಈ ವಿಳಂಬದ ಕಾರಣ ಕುರಿತು ತನಿಖೆ ಪ್ರಗತಿಯಲ್ಲಿದೆ.
ಟೋಕಿಯೊ ಮತ್ತು ಫುಕುವೊಕೊ ನಗರಗಳ ನಡುವೆ 1,000 ಕಿಮೀ ಅಂತರವಿದೆ. ವಿಮಾನವು ಭೂಸ್ಪರ್ಶ ಮಾಡುವ ಅಂತಿಮ ಸಮಯವಾದ ರಾತ್ರಿ 10 ಗಂಟೆಯ ನಂತರ 10 ನಿಮಿಷ ತಡವಾಗಿ ಫುಕುವೊಕೊಗೆ ಆಗಮಿಸಿತ್ತು ಎಂದು Asahi Shimbun ದಿನಪತ್ರಿಕೆ ವರದಿ ಮಾಡಿದೆ. ಹೀಗಾಗಿ ಆ ವಿಮಾನಕ್ಕೆ ಭೂಸ್ಪರ್ಶ ಮಾಡಲು ಅವಕಾಶ ನಿರಾಕರಿಸಿದ್ದರಿಂದಾಗಿ ಅದು ಮತ್ತೆ ಐದು ಗಂಟೆಗಳ ಕಾಲ ಟೋಕಿಯೊಗೆ ಮರು ಪ್ರಯಾಣ ಬೆಳೆಸಬೇಕಾಯಿತು.
ಇದನ್ನೂ ಓದಿ: ಸಿ.ಟಿ.ರವಿಗೆ ಉಚಿತ ಮಾಂಸದ ಊಟ ಪಾರ್ಸೆಲ್ ಕಳುಹಿಸಿದ ಕಾಂಗ್ರೆಸ್