ಹಾಲಿವುಡ್ ಕ್ರಿಟಿಕ್ಸ್ ಅಸೋಸಿಯೇಶನ್ ಪ್ರಶಸ್ತಿಗಳನ್ನು ಬಾಚಿಕೊಂಡ RRR

ಪ್ರಶಸ್ತಿ ಸ್ವೀಕರಿಸಿ ರಾಜಮೌಳಿ ಮಾಡಿದ ಭಾಷಣದ ವೀಡಿಯೋ ವೈರಲ್

Update: 2023-02-25 07:42 GMT

ಹೊಸದಿಲ್ಲಿ: ಲಾಸ್ ಏಂಜಲಿಸ್‍ನಲ್ಲಿ ನಡೆದ ಹಾಲಿವುಡ್ ಕ್ರಿಟಿಕ್ಸ್ ಅಸೋಸಿಯೇಶನ್ ಅವಾರ್ಡ್ಸ್ ಸಮಾರಂಭದಲ್ಲಿ ಎಸ್ ಎಸ್ ರಾಜಮೌಳಿ (SS Rajamouli) ಅವರ RRR ಮತ್ತೆ ಅಬ್ಬರಿಸಿದೆ. ಅತ್ಯುತ್ತಮ ಅಂತಾರಾಷ್ಟ್ರೀಯ ಚಿತ್ರ ಪ್ರಶಸ್ತಿ ಸಹಿತ ಅತ್ಯುತ್ತಮ ಆ್ಯಕ್ಷನ್ ಚಿತ್ರ, ಅತ್ಯುತ್ತಮ ಸ್ಟಂಟ್ಸ್ ಮತ್ತು ಅತ್ಯುತ್ತಮ ಒರಿಜಿನಲ್ ಹಾಡು ಪ್ರಶಸ್ತಿಯನ್ನು ಅಸ್ಕರ್ ನಾಮನಿರ್ದೇಶಿತ ನಾಟು ನಾಟು ಹಾಡಿಗೆ ಪಡೆದಿದೆ.

ಚಿತ್ರದ ನಿರ್ದೇಶಕ ಎಸ್ ಎಸ್ ರಾಜಮೌಳಿ ಮತ್ತು ಮುಖ್ಯ ನಟ ರಾಮ್ ಚರಣ್ (Ram Charan) ಪ್ರಶಸ್ತಿ ಸ್ವೀಕರಿಸಿದರು.

ಪ್ರಶಸ್ತಿ ಸ್ವೀಕರಿಸಿ ರಾಜಮೌಳಿ ಮಾಡಿದ ಭಾಷಣದ ವೀಡಿಯೋ ವೈರಲ್ ಆಗಿದೆ: "ಆಹ್! ಅತ್ಯುತ್ತಮ ಅಂತಾರಾಷ್ಟ್ರೀಯ ಚಲನಚಿತ್ರ. ಮತ್ತೆ ಭಾರತದಲ್ಲಿನ ನನ್ನ ಸಹ ಚಿತ್ರತಯಾರಕರಿಗೆ. ಅದು ನಮ್ಮೆಲ್ಲರಿಗೂ ಆಗಿದೆ ಏಕೆಂದರೆ ನಾವು ಕೂಡ ಅಂತಾರಾಷ್ಟ್ರೀಯ ಚಿತ್ರಗಳನ್ನು ಮಾಡಬಹುದೆಂಬ ವಿಶ್ವಾಸಕ್ಕಾಗಿ. ಥ್ಯಾಂಕ್ಯೂ ಎಚ್‍ಸಿಎ, ಈ ಪ್ರಶಸ್ತಿ ನಮಗೆ ಬಹಳಷ್ಟು ನೀಡಿದೆ, ಜೈ ಹಿಂದ್." ಎಂದು ಅವರು ಹೇಳಿದ್ದಾರೆ.

ಆಸ್ಕರ್ಸ್ ಗೆ ನಾಮನಿರ್ದೇಶನಗೊಂಡಿರುವ RRR, ಲಾಸ್ ಏಂಜಲಿಸ್‍ನಲ್ಲಿ ಈ ಹಿಂದೆ ನಡೆದ ಕ್ರಿಟಿಕ್ಸ್ ಚಾಯ್ಸ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅತ್ಯುತ್ತಮ ವಿದೇಶಿ ಭಾಷೆ ಚಲನಚಿತ್ರ ಮತ್ತು ನಾಟು ನಾಟು ಹಾಡಿಗೆ ಅತ್ಯುತ್ತಮ ಒರಿಜಿನಲ್ ಹಾಡು ಪ್ರಶಸ್ತಿ ಪಡೆದಿದೆ.

ಲಾಸ್ ಏಂಜಲಿಸ್‍ನಲ್ಲಿ ನಡೆದ 80ನೇ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಸಮಾರಂಭದಲ್ಲೂ ನಾಟು ನಾಟು ಅತ್ಯುತ್ತಮ ಹಾಡು ಪ್ರಶಸ್ತಿ ಗಳಿಸಿದೆ.

ಇದನ್ನೂ ಓದಿ: ಪ್ರೇಮಿಯನ್ನು ಮದುವೆಯಾಗಲು ಆಭರಣಗಳನ್ನು ಮಾರಿ ಭಾರತವನ್ನು ತಲುಪಿದ್ದ ಪಾಕ್ ಯುವತಿ 

Similar News