×
Ad

ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ ಎಸ್ಸಿ, ಎಸ್ಟಿ, ಒಬಿಸಿ, ಅಲ್ಪಸಂಖ್ಯಾತರು, ಮಹಿಳೆಯರು, ಯುವಜನತೆಗೆ 50% ಮೀಸಲಾತಿ

Update: 2023-02-25 22:17 IST

ನವ ರಾಯಪುರ, ಫೆ. 25: ತನ್ನ ಕಾರ್ಯಕಾರಿ ಸಮಿತಿಯಲ್ಲಿ ಪರಿಶಿಷ್ಟ ಜಾತಿ (ಎಸ್ಸಿ), ಪರಿಶಿಷ್ಟ ಪಂಗಡ (ಎಸ್ಟಿ), ಇತರ ಹಿಂದುಳಿದ ವರ್ಗ (ಒಬಿಸಿ), ಮಹಿಳೆ, ಅಲ್ಪಸಂಖ್ಯಾತರು ಹಾಗೂ ಯವಜನತೆಗೆ ಶೇ. 50 ಮೀಸಲಾತಿ ನೀಡಲು ಕಾಂಗ್ರೆಸ್ ಇಲ್ಲಿ ಶನಿವಾರ ನಡೆದ 85ನೇ ಪೂರ್ಣಾಧಿವೇಶನದಲ್ಲಿ ತನ್ನ ಸಂವಿಧಾನಕ್ಕೆ ತಿದ್ದುಪಡಿ ತಂದಿದೆ.

ಪಕ್ಷದ ತಿದ್ದುಪಡಿಯಾದ ಸಂವಿಧಾನದ ಪ್ರಕಾರ, ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಇನ್ನು ಮುಂದೆ ಪಕ್ಷದ ಮಾಜಿ ಪ್ರಧಾನ ಮಂತ್ರಿಗಳು ಹಾಗೂ ಐಎಸಿಸಿಯ ಮಾಜಿ ವರಿಷ್ಠರನ್ನು ಒಳಗೊಳ್ಳಲಿದೆ. ಇದರಿಂದ ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿಯ ಸದಸ್ಯರ ಸಂಖ್ಯೆ ಈ ಹಿಂದಿನ 25ರಿಂದ 35ಕ್ಕೆ ಏರಿಕೆಯಾಗಲಿದೆ. ಪಕ್ಷ ಇನ್ನು ಮುಂದೆ ಡಿಜಿಟಲ್ ಸದಸ್ಯತ್ವ ಹಾಗೂ ದಾಖಲೆಗಳನ್ನು ಮಾತ್ರ ಹೊಂದಿರಲಿದೆ ಎಂದು ತಿದ್ದುಪಡಿಯಾದ ಸಂವಿಧಾನ ಹೇಳಿದೆ.

Similar News