×
Ad

ಸಿಸೋಡಿಯಾ ಅವರ ಸಿಬಿಐ ವಿಚಾರಣೆ ವಿರುದ್ಧ ಪ್ರತಿಭಟನೆ: 50 ಎಎಪಿ ಕಾರ್ಯಕರ್ತರ ಬಂಧನ

Update: 2023-02-26 14:54 IST

ಹೊಸದಿಲ್ಲಿ: ಮದ್ಯ ನೀತಿ ಪ್ರಕರಣದಲ್ಲಿ ದಿಲ್ಲಿ ಉಪ ಮುಖ್ಯಮಂತ್ರಿ  ಮನೀಶ್ ಸಿಸೋಡಿಯಾ ಅವರನ್ನುಸಿಬಿಐ  ವಿಚಾರಣೆ ನಡೆಸುತ್ತಿರುವುದನ್ನು  ವಿರೋಧಿಸಿ ಆಮ್ ಆದ್ಮಿ ಪಕ್ಷವು ಪ್ರತಿಭಟನೆ ನಡೆಸಿದ್ದು, ದಿಲ್ಲಿ  ಪೊಲೀಸರು ಒಟ್ಟು 50 ಎಎಪಿ ಕಾರ್ಯಕರ್ತರನ್ನು ಬಂಧಿಸಿದ್ದಾರೆ.

ಸಿಜಿಒ ಕಾಂಪ್ಲೆಕ್ಸ್ ಬಳಿಯ ಲೋಧಿ ರೋಡ್ ನಲ್ಲಿ  ಎಎಪಿ ಪಕ್ಷದ ಕೆಲವು ಮುಖಂಡರು ಹಾಗೂ  ಬೆಂಬಲಿಗರು ಬ್ಯಾರಿಕೇಡ್ ದಾಟಿ ಸಿಬಿಐ ಕಚೇರಿ ಬಳಿ ಪ್ರತಿಭಟನೆ ಮಾಡುವ ಉದ್ದೇಶದಿಂದ ಜಮಾಯಿಸಿದರು. ಆದರೆ, ಅವರನ್ನು ತಡೆದ ಪೊಲೀಸರು  ಬ್ಯಾರಿಕೇಡ್ ದಾಟಲು ಬಿಡಲಿಲ್ಲ.

ರವಿವಾರ ಮಧ್ಯಾಹ್ನ 12:25ರ ಸುಮಾರಿಗೆ ಮುಖಂಡರು ಸಂಚಾರಕ್ಕೆ ಅಡ್ಡಿಪಡಿಸಿದರು. ಈ ಪ್ರದೇಶದಲ್ಲಿ ಸೆಕ್ಷನ್ 144 ಸಿಆರ್‌ಪಿಸಿ ವಿಧಿಸಲಾಗಿರುವುದರಿಂದ ಸ್ಥಳವನ್ನು ಖಾಲಿ ಮಾಡುವಂತೆ ಮನವಿ ಮಾಡಲಾಗಿತ್ತು. ಆದರೆ ಪ್ರತಿಭಟನಾಕಾರರು  ಕುಳಿತು ಘೋಷಣೆಗಳನ್ನು ಕೂಗಿದರು.

ಒಟ್ಟು 50 ಜನರನ್ನು (42 ಪುರುಷರು +8 ಮಹಿಳೆಯರು) ಬಂಧಿಸಲಾಯಿತು. ಬಂಧಿತರಲ್ಲಿ ಪ್ರಮುಖರೆಂದರೆ - ಸಂಸದ ಸಂಜಯ್ ಸಿಂಗ್, ತ್ರಿಲೋಕ್ ಪುರಿ ಶಾಸಕ ರೋಹಿತ್ ಕುಮಾರ್ ಮೆಹ್ರಾಲಿಯಾ, ಸಂಗಮ್ ವಿಹಾರ್ ಶಾಸಕ ದಿನೇಶ್ ಮೊಹ್ನಿಯಾ, ಕೊಂಡ್ಲಿ ಶಾಸಕ ಕುಲದೀಪ್ ಸಿಂಗ್, ರೋಹ್ತಾಶ್ ನಗರ ಮಾಜಿ ಶಾಸಕಿ ಸರಿತಾ ಸಿಂಗ್ ಹಾಗೂ  ಆಪ್ ಸಚಿವ ಗೋಪಾಲ್ ರೈ ಸೇರಿದ್ದಾರೆ.

Similar News