ಉಡುಪಿ: ರಾತ್ರಿ ಪೂರ್ತಿ ಡಿ.ಜೆ.ಸೌಂಡ್; ಪ್ರಕರಣ ದಾಖಲು
Update: 2023-02-27 20:36 IST
ಉಡುಪಿ, ಫೆ.27: 76-ಬಡಗುಬೆಟ್ಟು ಗ್ರಾಮದ ಪಣಿಯಾಡಿ ಅನಂತ ಪದ್ಮನಾಭ ದೇವಸ್ಥಾನದ ಬಳಿ ಮೆಹೆಂದಿ ಕಾರ್ಯಕ್ರಮದಲ್ಲಿ ಫೆ.27ರ ಬೆಳಗಿವ ಜಾವ 2ಗಂಟೆಯವರೆಗೆ ಡಿ.ಜೆ.ಸೌಂಡ್ಸ್ ಹಾಕಿ ಕಾನೂನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಮನೆಗೆ ದಾಳಿ ನಡೆಸಿದ ಪೊಲೀಸರು, ಸೊತ್ತುಗಳನ್ನು ವಶಪಡಿಸಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ.
ಪಣಿಯಾಡಿ ನಿವಾಸಿ ಶರತ್ ಎಂಬಾತ ತನ್ನ ಮನೆಯ ಅಂಗಳದಲ್ಲಿ ಶಾಮಿಯಾನ ಹಾಕಿ, ಯಾವುದೇ ಪರವಾನಿಗೆ ಅಥವಾ ಪೂರ್ವಾನುಮತಿ ಇಲ್ಲದೆ ಅತೀ ಕರ್ಕಶವಾದ ಡಿ.ಜೆ.ಸೌಂಡ್ಸ್ ಹಾಕಿಕೊಂಡು ರಾತ್ರಿ 2ಗಂಟೆ ತನಕ ನೃತ್ಯ ಮಾಡುತ್ತಿದ್ದರೆಂದು ದೂರಲಾಗಿದೆ.
ಈ ಬಗ್ಗೆ ಮಾಹಿತಿ ಪಡೆದು ದಾಳಿ ನಡೆಸಿದ ಉಡುಪಿ ನಗರ ಪೊಲೀಸರು, ಲೈಟ್ ಕಂಟ್ರೋಲರ್, ಡಿಜೆ ಕಂಟ್ರೋಲರ್, ಸೌಂಡ್ ಕಂಟ್ರೋಲರ್ ಹಾಗೂ ನಾಲ್ಕು ಸೌಂಡ್ ಬಾಕ್ಸ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.