ಸಿಸೋಡಿಯಾ ಬಂಧನಕ್ಕೆ ಹೆಚ್ಚಿನ ಸಿಬಿಐ ಅಧಿಕಾರಿಗಳು ವಿರುದ್ಧವಾಗಿದ್ದರು: ಕೇಜ್ರಿವಾಲ್

Update: 2023-02-27 17:35 GMT

ಹೊಸದಿಲ್ಲಿ,ಫೆ.17: ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ(Manish Sisodia) ಬಂಧನಕ್ಕೆ ಹೆಚ್ಚಿನ ಸಿಬಿಐ(CBI) ಅಧಿಕಾರಿಗಳು ವಿರುದ್ಧವಾಗಿದ್ದರು ಎಂದು ಆಪ್ ಸಂಚಾಲಕ ಹಾಗೂ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್(Arvind Kejriwal) ಅವರು ಸೋಮವಾರ ಪ್ರತಿಪಾದಿಸಿದ್ದಾರೆ. ದಿಲ್ಲಿ ಸರಕಾರದ ಹೊಸ ಅಬಕಾರಿ ನೀತಿ ಕುರಿತು ತನಿಖೆಗೆ ಸಂಬಂಧಿಸಿದಂತೆ ಸಿಸೋಡಿಯಾರನ್ನು ಸಿಬಿಐ ರವಿವಾರ ಬಂಧಿಸಿದೆ.

‘ಎಲ್ಲ ಸಿಬಿಐ ಅಧಿಕಾರಿಗಳು ಸಿಸೋಡಿಯಾ ಬಗ್ಗೆ ಹೆಚ್ಚಿನ ಗೌರವವನ್ನು ಹೊಂದಿದ್ದಾರೆ ಮತ್ತು ಅವರ ವಿರುದ್ಧ ಯಾವುದೇ ಪುರಾವೆಗಳಿಲ್ಲ ಎಂದು ಒತ್ತಿ ಹೇಳಿದ್ದರು. ಆದರೆ ತಮ್ಮ ರಾಜಕೀಯ ಧಣಿಗಳಿಗೆ ವಿಧೇಯರಾಗಿರಲು ರಾಜಕೀಯ ಒತ್ತಡಕ್ಕೆ ಸಿಲುಕಿ ಸಿಸೋಡಿಯಾರನ್ನು ಬಂಧಿಸಿದ್ದೇವೆ ಎಂದು ಈ ಅಧಿಕಾರಿಗಳು ನನಗೆ ತಿಳಿಸಿದ್ದಾರೆ ’ಎಂದು ಕೇಜ್ರಿವಾಲ್ ಟ್ವೀಟಿಸಿದ್ದಾರೆ.

ಕೇಜ್ರಿವಾಲ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ ಸಂಸದ ಮನೋಜ್ ತಿವಾರಿಯವರು, ‘2022ರ ಗುಜರಾತ್ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿಯೂ ದಿಲ್ಲಿ ಮುಖ್ಯಮಂತ್ರಿಗಳು ಗುಪ್ತಚರ ಸಂಸ್ಥೆ (ಐಬಿ) ಬಗ್ಗೆ ಇಂತಹುದೇ ಸುಳ್ಳುಸುದ್ದಿಗಳನ್ನು ಹರಡಿದ್ದರು. ಕೇಜ್ರಿವಾಲ್ ಬರೆಯುವುದು ಮತ್ತು ಹೇಳುವುದೆಲ್ಲವೂ ಕಪೋಲಕಲ್ಪಿತ ಎನ್ನುವುದು ಈಗ ಪ್ರತಿಯೊಬ್ಬರಿಗೂ ಗೊತ್ತಾಗಿದೆ ’ಎಂದು ಟ್ವೀಟಿಸಿದ್ದಾರೆ.

Similar News