×
Ad

ಸಿಬಿಐ ಬಂಧನ ವಿರುದ್ಧ ಸುಪ್ರೀಂಕೋರ್ಟ್ ಮೊರೆ ಹೋದ ದಿಲ್ಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ

Update: 2023-02-28 11:00 IST

ಹೊಸದಿಲ್ಲಿ: ಅಬಕಾರಿ ನೀತಿ  ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) ತನ್ನನ್ನು ಬಂಧಿಸಿರುವುದನ್ನು ವಿರೋಧಿಸಿ ದಿಲ್ಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ (Manish Sisodia) ಅವರು ಮಂಗಳವಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಮೂಲಗಳ ಪ್ರಕಾರ, ಸಿಸೋಡಿಯಾ ಅವರು ತಮ್ಮ ಮನವಿಯ ತುರ್ತು ವಿಚಾರಣೆಯನ್ನು ಕೋರುತ್ತಿದ್ದಾರೆ ಹಾಗೂ  ಸಿಜೆಐ ಡಿ.ವೈ. ಚಂದ್ರಚೂಡ್ ಅವರ ಮಧ್ಯಸ್ಥಿಕೆಯನ್ನು ಕೋರಿದ್ದಾರೆ.

 "ಸರಿಯಾದ ಹಾಗೂ  ನ್ಯಾಯೋಚಿತ ತನಿಖೆ" ಗಾಗಿ ಕೇಳಲಾಗುವ ಪ್ರಶ್ನೆಗಳಿಗೆ "ನಿಜವಾದ ಮತ್ತು ಕಾನೂನುಬದ್ಧ" ಉತ್ತರಗಳನ್ನು ಪಡೆಯಲು ಸಿಬಿಐಗೆ ಅವಕಾಶ ನೀಡಲು ವಿಶೇಷ ನ್ಯಾಯಾಲಯವು ಸೋಮವಾರ ಅಬಕಾರಿ ನೀತಿ ಪ್ರಕರಣದಲ್ಲಿ ಸಿಸೋಡಿಯಾ ಅವರನ್ನು ಐದು ದಿನಗಳ ಸಿಬಿಐ ವಶಕ್ಕೆ ಕಳುಹಿಸಿದೆ.

  ಸಿಸೋಡಿಯಾರನ್ನು ಬಂಧಿಸಿದ ಒಂದು ದಿನದ ನಂತರ ನ್ಯಾಯಾಲಯದ ಮುಂದೆ ಹಾಜರುಪಡಿಸಿದ ಸಿಬಿಐ,  ಮನವಿಯ ಮೇರೆಗೆ ವಿಶೇಷ ನ್ಯಾಯಾಧೀಶ ಎಂ.ಕೆ. ನಾಗ್ಪಾಲ್ ಈ ಆದೇಶವನ್ನು ನೀಡಿದರು.

Similar News