×
Ad

ತೆಲಂಗಾಣ: ಹಿಂದೂ ದೇವ-ದೇವತೆಯನ್ನು ನಿಂದಿಸಿದ್ದ ವ್ಯಕ್ತಿಗೆ ಪೊಲೀಸ್ ವ್ಯಾನ್ ನೊಳಗೆ ಥಳಿಸಿದ ಗುಂಪು!

Update: 2023-02-28 12:11 IST

ಹೈದರಾಬಾದ್: ಹಿಂದೂ ದೇವ-ದೇವತೆಗಳ ವಿರುದ್ಧ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ ಆರೋಪದ ಮೇಲೆ ಕಳೆದ ವರ್ಷ ಬಂಧಿಸಲ್ಪಟ್ಟಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸ್ ವ್ಯಾನ್‌ನೊಳಗೆ ಥಳಿಸಿದ ಘಟನೆ ತೆಲಂಗಾಣದಲ್ಲಿ ನಡೆದಿದೆ.

42 ವರ್ಷದ ಬೈರಿ ನರೇಶ್ ಕಾನೂನು ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದಾಗ ತನ್ನನ್ನು ಥಳಿಸಲು ಗುಂಪು ಬರಬಹುದು ಎಂದು ಹೇಳಿದ್ದ.

ದಾಳಿಯ ಭೀತಿಯಿಂದ ನರೇಶ್ ಪೊಲೀಸರಿಗೆ ಕರೆ ಮಾಡಿದ್ದಾನೆ. ಯಾವುದೇ ತೊಂದರೆಯಾಗದಂತೆ ನರೇಶ್ ನನ್ನು ಕರೆದೊಯ್ಯಲು ಪೊಲೀಸರು ಬಂದಾಗ ಗುಂಪೊಂದು ಧಾವಿಸಿ ಬಂದು ಪೊಲೀಸ್ ವಾಹನದೊಳಗೆ ಕುಳಿತ್ತಿದ್ದ ನರೇಶ್ ನನ್ನು ಥಳಿಸಿದೆ. ಪೊಲೀಸರು ಆತನನ್ನು ರಕ್ಷಿಸಲು ಪ್ರಯತ್ನಿಸಿದರು, ಆದರೆ ಗುಂಪು ಆತನಿಗೆ ಚೆನ್ನಾಗಿ  ಥಳಿಸಿದೆ.

ಘಟನೆಯ ವೀಡಿಯೊದಲ್ಲಿ ದಾಳಿಕೋರರು ಪೊಲೀಸ್ ವಾಹನವನ್ನು ಸುತ್ತುವರಿದು ನರೇಶ್ ನನ್ನು ಪೊಲೀಸರ ಎದುರಲ್ಲೇ  ಥಳಿಸಿದ್ದಾರೆ. ಗುಂಪು ನರೇಶ್ ನನ್ನು  ಥಳಿಸಿ, ಎಳೆದರು ಹಾಗೂ ಆತನ ಬಟ್ಟೆಗಳನ್ನು ಹರಿದು ಹಾಕಿದೆ.

ತೆಲಂಗಾಣದ ಹನಮಕೊಂಡ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಈ ದಾಳಿಯನ್ನು ಸಂಘಪರಿವಾರ ನಡೆಸಿದೆ ಎನ್ನಲಾಗಿದೆ.

ಎಲ್ಲಾ ದಾಳಿಕೋರರನ್ನು ಬಂಧಿಸಲಾಗಿದೆ ಎಂದು ವಾರಂಗಲ್ ಪೊಲೀಸ್ ಆಯುಕ್ತ ಎ. ವಿ. ರಂಗನಾಥ್ ಎನ್‌ಡಿಟಿವಿಗೆ ತಿಳಿಸಿದ್ದಾರೆ.

Similar News