ಅದಾನಿ ಕಲ್ಲಿದ್ದಲು ಉದ್ಯಮಕ್ಕೆ ಮೋದಿ ಸರ್ಕಾರದ ವಿಶೇಷ ಸಹಾಯ: The Reporters’ Collective ತನಿಖಾ ವರದಿ
ಹೊಸದಿಲ್ಲಿ: ವಿವಾದಿತ ಅದಾನಿ ಸಮೂಹದ ಮುಖ್ಯಸ್ಥ ಗೌತಮ್ ಅದಾನಿ (Gautum Adani) ಅವರ ಕಲ್ಲಿದ್ದಲು ಉದ್ಯಮಕ್ಕೆ ಪೂರಕವಾಗಿ ಭಾರತ ಸರಕಾರ ಅಭೂತಪೂರ್ವ ಸಹಾಯ ಮಾಡಿದೆ ಎಂದು The Reporters’ Collective ತನಿಖೆಯ ದಾಖಲೆಗಳನ್ನು ಉಲ್ಲೇಖಿಸಿ aljazeera.com ವರದಿ ಮಾಡಿದೆ.
ಕಲ್ಲಿದ್ದಲು ಬ್ಲಾಕ್‌ಗಳನ್ನು ಖಾಸಗಿ ರಂಗಕ್ಕೆ ಹಸ್ತಾಂತರಿಸುವ ಒಂದು ನಿರ್ದಿಷ್ಟ ನಿಯಮವು ಅಸೂಕ್ತವಾಗಿದೆ ಮತ್ತು ಪಾರದರ್ಶಕವಾಗಿಲ್ಲ ಎಂದು ಹೇಳಿದ್ದ ಪ್ರಧಾನಿ ನರೇಂದ್ರ ಮೋದಿಯ (PM Narendra Modi) ಕಾರ್ಯಾಲಯ, ಅದೇ ನಿಯಮದಲ್ಲಿ ವಿನಾಯಿತಿಯನ್ನು ಅದಾನಿ ಸಮೂಹಕ್ಕೆ ನೀಡಿತ್ತು ಎಂದು ವರದಿ ಹೇಳಿದೆ.
ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ ಸಂಸ್ಥೆಗೆ ಭಾರತದ ಅತ್ಯಂತ ಕಡಿದಾದ ಅರಣ್ಯ ಪ್ರದೇಶಗಳೊಂದರಲ್ಲಿ 450 ಮಿಲಿಟನ್ ಟನ್ ಕಲ್ಲಿದ್ದಲು ಹೊಂದಿದ್ದ ಬ್ಲಾಕಿನಲ್ಲಿ ಗಣಿಗಾರಿಕೆಗೆ ಸರ್ಕಾರ ಅನುಮತಿಸಿತ್ತು ಆದರೆ ಇತರ ಕಂಪೆನಿಗಳಿಗೆ ಅನುಮತಿಸಿಲ್ಲ ಎಂದು ವರದಿ ಹೇಳಿದೆ.
ಆದರೆ ಅದಾನಿ ಸಂಸ್ಥೆಗೆ ನಿಯಮದಿಂದ ಏಕೆ ವಿನಾಯಿತಿ ನೀಡಲಾಗಿದೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಿಲ್ಲ ಎಂದ ದಿ ರಿಪೋರ್ಟರ್ಸ್ ಕಲೆಕ್ಟಿವ್‌ಗೆ ದೊರೆತ ದಾಖಲೆಗಳಿಂದ ತಿಳಿದು ಬಂದಿದೆ ಎಂದು ವರದಿ ಹೇಳಿದೆ.
204 ಕಲ್ಲಿದ್ದಲು ಬ್ಲಾಕ್‌ಗಳನ್ನು ಮಂಜೂರುಗೊಳಿಸಿದ್ದನ್ನು 2014 ರಲ್ಲಿ ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ರದ್ದುಗೊಳಿಸಿದ ನಂತರ ಸರ್ಕಾರ ಜಾರಿಗೊಳಿಸಿದ್ದ ಒಂದು ನಿರ್ದಿಷ್ಟ ನಿಯಮಾವಳಿಯಿಂದ ಅದಾನಿ ಸಂಸ್ಥೆಗೆ ಸರ್ಕಾರ ವಿನಾಯಿತಿ ನೀಡಿತ್ತು.
ದಿ ರಿಪೋರ್ಟರ್ಸ್ ಕಲೆಕ್ಟಿವ್‌ನ ತನಿಖಾ ವರದಿಯ ಎರಡನೇ ಭಾಗ ಇದಾಗಿದ್ದು ಭಾರತದ ಕಲ್ಲಿದ್ದಲು ಸಂಗ್ರಹಣೆಯನ್ನು ಪಡೆಯಲು ಉದ್ಯಮ ಸಂಸ್ಥೆಗಳು ಶೆಲ್ ಕಂಪೆನಿಗಳನ್ನು ಹೇಗೆ ಬಳಸುತ್ತಿವೆ ಎಂಬ ಕುರಿತ ಸಿಎಜಿ ಕಳವಳ ಕುರಿತಂತೆ ಮೋದಿ ಸರ್ಕಾರ ಗಂಭಿರವಾಗಿ ಪರಿಗಣಿಸದೇ ಇದ್ದುದನ್ನು ಮೊದಲ ಭಾಗದ ವರದಿಯಲ್ಲಿ ಉಲ್ಲೇಖಿಸಲಾಗಿತ್ತು.
ಇದನ್ನೂ ಓದಿ: ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ಉಪನ್ಯಾಸ ನೀಡುವುದಕ್ಕೂ ಮೊದಲು ಹೊಸ ಲುಕ್ ನಲ್ಲಿ ಕಾಣಿಸಿಕೊಂಡ ರಾಹುಲ್ ಗಾಂಧಿ