ತಮಿಳುನಾಡು, ಮಹಾರಾಷ್ಟ್ರ ಉಪ ಚುನಾವಣೆ: ಮತ ಎಣಿಕೆ ಆರಂಭ

Update: 2023-03-02 04:59 GMT

ಹೊಸದಿಲ್ಲಿ: ಅರುಣಾಚಲ ಪ್ರದೇಶ, ಜಾರ್ಖಂಡ್, ಪಶ್ಚಿಮ ಬಂಗಾಳ, ತಮಿಳುನಾಡಿನ ತಲಾ ಒಂದು ಹಾಗೂ  ಮಹಾರಾಷ್ಟ್ರದ ಎರಡು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯ ಮತ ಎಣಿಕೆ ಗುರುವಾರ ಆರಂಭವಾಗಿದೆ.

ಈ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಸೋಮವಾರ ಮತದಾನ ನಡೆದಿದೆ.

ಇತ್ತೀಚಿನ ಟ್ರೆಂಡ್‌ಗಳ ಪ್ರಕಾರ ಎಐಎಡಿಎಂಕೆಯ ತೆನ್ನರಸು ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಇಳಂಗೋವನ್ ಮುನ್ನಡೆ ಸಾಧಿಸಿದ್ದಾರೆ. ಪ್ರತಿಷ್ಠಿತ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ರಾಜಕೀಯ ಪಕ್ಷಗಳ  ಒಟ್ಟು 77 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ.

ಅರುಣಾಚಲ ಪ್ರದೇಶದ ಲುಮ್ಲಾ ಉಪಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಗೆಲುವನ್ನು ಚುನಾವಣಾ ಆಯೋಗ ಖಚಿತಪಡಿಸಿದೆ.

ಮಹಾರಾಷ್ಟ್ರದಲ್ಲಿ ಚಿಂಚ್ವಾಡ್ ಹಾಗೂ  ಕಸ್ಬಾ ಪೇಠ್ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ  ಮತ ಎಣಿಕೆ ಆರಂಭವಾಗಿದೆ.

ಬಿಜೆಪಿ ಮತ್ತು ಮಹಾ ವಿಕಾಸ್ ಅಘಾಡಿ (ಎಂವಿಎ) ನಡುವಿನ ದ್ವಿಮುಖ ಹೋರಾಟವು ಕಸ್ಬಾ ಪೇಠ್‌ನ ಚುನಾವಣಾ ಫಲಿತಾಂಶವನ್ನು ನಿರ್ಧರಿಸುತ್ತದೆ. ಬಿಜೆಪಿಯ ಹೇಮಂತ್ ರಸಾನೆ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ರವೀಂದ್ರ ಧಾಂಗೇಕರ್  ಕಣದಲ್ಲಿದ್ದಾರೆ.

ಚಿಂಚ್ವಾಡ್ ನಲ್ಲಿ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಅಭ್ಯರ್ಥಿ ವಿಠ್ಠಲ್ ಕಾಟೆ, ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಶ್ವಿನಿ ಜಗತಾಪ್ ಹಾಗೂ  ಸ್ವತಂತ್ರ ರಾಹುಲ್ ಕಲಾಟೆ ನಡುವೆ ಸ್ಪರ್ಧೆ ಇದೆ. ಚಿಂಚ್ವಾಡ್ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯ ಶಾಸಕ ಲಕ್ಷ್ಮಣ್ ಜಗತಾಪ್ ಹಾಗೂ  ಕಸ್ಬಾ ಪೇಠ್ ವಿಧಾನಸಭಾ ಕ್ಷೇತ್ರದಿಂದ ಮುಕ್ತಾ ತಿಲಕ್ ಅವರ ನಿಧನದ ನಂತರ ಉಪಚುನಾವಣೆ ಅನಿವಾರ್ಯವಾಗಿತ್ತು.

Similar News