ತ್ರಿಪುರಾ: ಮುನ್ನಡೆ ಕಾಯ್ದುಕೊಂಡಿರುವ ಬಿಜೆಪಿಗೆ ತಿಪ್ರಾ ಪಕ್ಷದಿಂದ ಪೈಪೋಟಿ

Update: 2023-03-02 05:47 GMT

ಅಗರ್ತಲ: ತ್ರಿಪುರಾದಲ್ಲಿ ವಿಧಾನಸಭಾ ಚುನಾವಣೆಯ ಮತ ಎಣಿಕೆಯಲ್ಲಿ ಆಡಳಿತಾರೂಢ ಬಿಜೆಪಿ-ಐಪಿಎಫ್‌ಟಿ ಮೈತ್ರಿಕೂಟ 31 ಸ್ಥಾನಗಳಲ್ಲಿ   ಮುನ್ನಡೆಯನ್ನು ಕಾಯ್ದುಕೊಂಡಿದ್ದರೂ  ಪ್ರತಿ ಸ್ಪರ್ಧಿ ಎಡಪಕ್ಷಗಳು ಹಾಗೂ ಕಾಂಗ್ರೆಸ್ ಮೈತ್ರಿಕೂಟ 16 ಸ್ಥಾನಗಳಲ್ಲಿ  ಹಾಗೂ ಮಾಜಿ ರಾಜಮನೆತನದ ಪ್ರದ್ಯೋತ್ ಮಾಣಿಕ್ಯ ದೆಬ್ಬರ್ಮಾ ನೇತೃತ್ವದ ತಿಪ್ರಾ ಮೋಥಾ ಪಕ್ಷವು 12 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿ ಪೈಪೋಟಿ ನೀಡುತ್ತಿವೆ.

ರಾಜ್ಯ ಬಿಜೆಪಿ ಮುಖ್ಯಸ್ಥ ರಾಜೀಬ್ ಭಟ್ಟಾಚಾರ್ಜಿ ಬನಮಾಲಿಪುರ ಕ್ಷೇತ್ರದಿಂದ ಹಿನ್ನಡೆಯಲ್ಲಿದ್ದಾರೆ ಎಂದು ಆರಂಭಿಕ ಪ್ರವೃತ್ತಿಗಳು ತೋರಿಸುತ್ತವೆ

Similar News