×
Ad

ತ್ರಿಪುರಾದಲ್ಲಿ ಕಿಂಗ್ ಮೇಕರ್ ಆಗಲಿದಯೇ ತಿಪ್ರಾ ಮೋಥಾ ಪಕ್ಷ?

Update: 2023-03-02 13:26 IST

ಅಗರ್ತಲ: ತ್ರಿಪುರಾದ ರಾಜಮನೆತನದ ವಂಶಸ್ಥರಾದ ಪ್ರದ್ಯೋತ್ ಮಾಣಿಕ್ಯ ದೆಬ್ಬರ್ಮಾ  ಅವರ ಪ್ರಾದೇಶಿಕ ಪಕ್ಷವಾದ ತಿಪ್ರಾ ಮೋಥಾ, ತ್ರಿಪುರಾದಲ್ಲಿ ಮುಂದಿನ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸುವ ಸಾಧ್ಯತೆ ಇದೆ.

ಮತ ಎಣಿಕೆ ವೇಳೆ, ಪರಿಶಿಷ್ಟ ಪಂಗಡಕ್ಕೆ ಮೀಸಲಾದ 20 ವಿಧಾನಸಭಾ ಕ್ಷೇತ್ರಗಳ ಪೈಕಿ 12 ವಿಧಾನಸಭಾ ಕ್ಷೇತ್ರಗಳಲ್ಲಿ ತಿಪ್ರಾ ಮೋತಾ ಮುನ್ನಡೆ ಸಾಧಿಸಿದ್ದು, ಆಡಳಿತಾರೂಢ ಬಿಜೆಪಿ ಮತ್ತು ಎಡ-ಕಾಂಗ್ರೆಸ್ ಮೈತ್ರಿಕೂಟದ ನಿರೀಕ್ಷೆಯನ್ನು ಹುಸಿಗೊಳಿಸಿದೆ.

ಸುದ್ದಿ ಮೂಲಗಳ ಪ್ರಕಾರ ಬಿಜೆಪಿ-ಐಪಿಎಫ್‌ಟಿ ಮೈತ್ರಿಕೂಟವು 30 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಬಹುಮತಕ್ಕೆ ಇನ್ನೂ ಒಂದು ಕ್ಷೇತ್ರ ಬೇಕಿದೆ. ಪ್ರತಿಪಕ್ಷಗಳಾದ ಎಡ-ಕಾಂಗ್ರೆಸ್ ಮೈತ್ರಿಕೂಟ 17 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.

ರಾಜ್ಯದ ಬುಡಕಟ್ಟು ಜನಾಂಗ ಹೆಚ್ಚಾಗಿರುವ ಕ್ಷೇತ್ರಗಳಲ್ಲಿನ ಬಿಜೆಪಿಯ ಮತಗಳ ಪಾಲನ್ನು ತಿಪ್ರಾ ಮೋಥಾ ಪಕ್ಷವು ಗಣನೀಯವಾಗಿ ಸೆಳೆದುಕೊಂಡಿದೆ  ಎಂದು ಆರಂಭಿಕ ಮತಎಣಿಕೆಯು ಸೂಚಿಸಿದೆ

ಇದನ್ನು ಓದಿ: ಪಶ್ಚಿಮ ಬಂಗಾಳ ಉಪ ಚುನಾವಣೆ: ಟಿಎಂಸಿ ಭದ್ರಕೋಟೆಯಲ್ಲಿ ಕಾಂಗ್ರೆಸ್ ಗೆ ಮುನ್ನಡೆ

Similar News