ನಾಗಾಲ್ಯಾಂಡ್ ವಿಧಾನಸಭೆಗೆ ಆಯ್ಕೆಯಾದ ಮೊದಲ ಮಹಿಳೆ ಹೆಕಾನಿ ಜಖಾಲು
Update: 2023-03-02 13:30 IST
ಹೊಸದಿಲ್ಲಿ: ಎನ್‌ಡಿಪಿಪಿಯ ಹೆಕಾನಿ ಜಖಾಲು ಅವರು 60 ಸದಸ್ಯ ಬಲದ ನಾಗಾಲ್ಯಾಂಡ್ ವಿಧಾನಸಭೆಗೆ ಆಯ್ಕೆಯಾದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
2023ರ ನಾಗಾಲ್ಯಾಂಡ್ ಅಸೆಂಬ್ಲಿ ಚುನಾವಣೆಯಲ್ಲಿ ದಿಮಾಪುರ್-III ಕ್ಷೇತ್ರದಿಂದ ಸ್ಪರ್ಧಿಸಿದ್ದ ಜಖಾಲು ಅವರನ್ನು ವಿಜೇತರೆಂದು ಘೋಷಿಸಲಾಯಿತು.
ಜಖಾಲು ಅವರು 1,536 ಮತಗಳಿಂದ ಎಲ್‌ಜೆಪಿಯ (ರಾಮ್ ವಿಲಾಸ್) ಅಜೆಟೊ ಜಿಮೊಮಿ ಅವರನ್ನು ಸೋಲಿಸಿದರು.