ಮೂರನೇ ಟೆಸ್ಟ್: ಲಿಯೊನ್ ಸ್ಪಿನ್ ಮೋಡಿಗೆ ಭಾರತ ತತ್ತರ, ಆಸ್ಟ್ರೇಲಿಯ ಗೆಲುವಿಗೆ 76 ರನ್ ಗುರಿ
Update: 2023-03-02 17:06 IST
ಇಂದೋರ್, ಮಾ.2: ಚೇತೇಶ್ವರ ಪೂಜಾರ ಅರ್ಧಶತಕ(59 ರನ್, 142 ಎಸೆತ)ಸಿಡಿಸಿದ ಹೊರತಾಗಿಯೂ ಭಾರತವು ಆಸ್ಟ್ರೇಲಿಯ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ತನ್ನ 2ನೇ ಇನಿಂಗ್ಸ್‌ನಲ್ಲಿ ಕೇವಲ 163 ರನ್‌ಗೆ ಆಲೌಟಾಗಿದೆ. ಆಸ್ಟ್ರೇಲಿಯಕ್ಕೆ ಗೆಲ್ಲಲು 76 ರನ್ ಗುರಿ ನೀಡಿದೆ.
2ನೇ ದಿನದಾಟವಾದ ಗುರುವಾರ ಆಸ್ಟ್ರೇಲಿಯವನ್ನು ಮೊದಲ ಇನಿಂಗ್ಸ್‌ನಲ್ಲಿ 197 ರನ್‌ಗೆ ನಿಯಂತ್ರಿಸಿ 2ನೇ ಇನಿಂಗ್ಸ್ ಆರಂಭಿಸಿದ ಭಾರತವು ಸ್ಪಿನ್ ಬೌಲರ್ ನಥಾನ್ ಲಿಯೊನ್ ಸ್ಪಿನ್ ಮೋಡಿಗೆ(8-64)ತತ್ತರಿಸಿ 60.3 ಓವರ್‌ಗಳಲ್ಲಿ 163 ರನ್‌ಗೆ ಆಲೌಟಾಯಿತು.
ಮೊದಲ ಇನಿಂಗ್ಸ್‌ನಲ್ಲಿ 88 ರನ್ ಮುನ್ನಡೆ ಪಡೆದಿದ್ದ ಆಸ್ಟ್ರೇಲಿಯ ಗೆಲುವಿಗೆ ಸುಲಭ ಸವಾಲು ಪಡೆದಿದೆ.