×
Ad

1,257 ಮತಗಳ ಅಂತರದಿಂದ ಕಾಂಗ್ರೆಸ್‌ ಅಭ್ಯರ್ಥಿ ವಿರುದ್ಧ ಗೆಲುವು: 2ನೇ ಬಾರಿ ಮುಖ್ಯಮಂತ್ರಿ ಹುದ್ದೆಯತ್ತ ಮಾಣಿಕ್‌ ಸಹಾ

Update: 2023-03-02 21:13 IST

ಅಗರ್ತಲಾ: ಕಾಂಗ್ರೆಸ್‌ನ ಹಿರಿಯ ನಾಯಕ ಆಶಿಶ್ ಕುಮಾರ್ ಸಹಾ ಅವರನ್ನು 1,257 ಮತಗಳ ಅಂತರದಿಂದ  ಬಿಜೆಪಿಯ ಮಾಣಿಕ್ ಸಹಾ ಸೋಲಿಸಿದ್ದಾರೆ. ಬಿಪ್ಲಬ್ ದೇಬ್ ಅವರ ಬದಲಿಯಾಗಿ ಸಿಎಂ ಪಟ್ಟಕ್ಕೆ ಏರಿದ್ದ ಮಾಣಿಕ್ ಸಹಾ ಅವರು ಮತ್ತೊಮ್ಮೆ ತ್ರಿಪುರಾದ ಮುಖ್ಯಮಂತ್ರಿಯಾಗುವ ಸಾಧ್ಯತೆ ಇದೆ.

ಬಿಪ್ಲಬ್‌ ದೇವ್‌ ಬಳಿಕ ಮುಖ್ಯಮಂತ್ರಿ ಪದವಿಗೇರಿದ ಮಾಣಿಕ್‌ ಸಹಾ ಅವರು, 2020 ರಲ್ಲಿ ತ್ರಿಪುರಾದ ಬಿಜೆಪಿ ಘಟಕದ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದರು.   ಕಳೆದ ವರ್ಷ ಎಪ್ರಿಲ್ 3 ರಿಂದ ಜುಲೈ 4 ರವರೆಗೆ ರಾಜ್ಯಸಭೆಯ ಸದಸ್ಯರಾಗಿ ಅಲ್ಪಾವಧಿ ಸೇವೆ ಸಲ್ಲಿಸಿದ್ದರು.

ಸಹಾ ಅವರು 2022 ರಲ್ಲಿ ನಡೆದ ಉಪಚುನಾವಣೆಯಲ್ಲಿ ರಾಜ್ಯದ ರಾಜಧಾನಿ ಅಗರ್ತಲಾದಿಂದ ಹೊರವಲಯದಲ್ಲಿರುವ ಟೌನ್ ಬಾರ್ಡೋವಾಲಿ ಸ್ಥಾನವನ್ನು ಗೆದ್ದಿದ್ದರು. ರಾಜಕೀಯಕ್ಕೆ ಸೇರುವ ಮೊದಲು ಸಹಾ ಅವರು ಹಪಾನಿಯಾದಲ್ಲಿರುವ ತ್ರಿಪುರಾ ವೈದ್ಯಕೀಯ ಕಾಲೇಜಿನಲ್ಲಿ ಪಾಠ ಮಾಡುತ್ತಿದ್ದರು.

ಸಹಾ ಅವರನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಿದ್ದು, ಬಿಜೆಪಿಯ ತ್ರಿಪುರಾ ಘಟಕದೊಳಗೆ ಹಲವಾರು ಸಚಿವರು, ಶಾಸಕರು ಮತ್ತು ಹಿರಿಯ ನಾಯಕರಿಗೆ ಅಸಮಾಧಾನವನ್ನು  ಹುಟ್ಟುಹಾಕಿತ್ತು.

Similar News