ನಾಗಾಲ್ಯಾಂಡ್ ವಿಧಾನಸಭೆಗೆ ಇಬ್ಬರು ಮಹಿಳೆಯರು ಆಯ್ಕೆ: ಹೊಸ ಇತಿಹಾಸ ಸೃಷ್ಟಿ
Update: 2023-03-02 22:49 IST
ಗುವಾಹಟಿ, ಮಾ. 2: 60 ಸದಸ್ಯ ಬಲದ ನಾಗಾಲ್ಯಾಂಡ್ ವಿಧಾನಸಭೆಗೆ ಆಯ್ಕೆಯಾದ ಮೊದಲ ಮಹಿಳೆಯಾಗಿ ಎನ್ಡಿಪಿಪಿಯ ಹೇಕನಿ ಜಖಲು ಗುರುವಾರ ಇತಿಹಾಸ ಸೃಷ್ಟಿಸಿದ್ದಾರೆ. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಅವರು ದಿಮಾಪುರ್- III ಕ್ಷೇತ್ರದಿಂದ ವಿಜಯಿಯಾಗಿ ಹೊರಹೊಮ್ಮಿದ್ದಾರೆ.
ಆಡಳಿತಾರೂಢ ನ್ಯಾಶನಲಿಸ್ಟ್ ಡೆಮಾಕ್ರಟಿಕ್ ಪ್ರೊಗ್ರೆಸಿವ್ ಪಾರ್ಟಿ (NDPP)ಯನ್ನು ಪ್ರತಿನಿಧಿಸಿರುವ ಅವರು, ಹಾಲಿ ಶಾಸಕ ಲೋಕಜನಶಕ್ತಿ ಪಕ್ಷ (ರಾಮ್ ವಿಲಾಸ್)ದ ಅಝೆಟೊ ಝಿಮೋಮಿಯನ್ನು 1,536 ಮತಗಳ ಅಂತರದಿಂದ ಸೋಲಿಸಿದರು.
ಜಖಲು ಈ ಚುನಾವಣೆಯಲ್ಲಿ ಸ್ಪರ್ಧಿಸಿರುವ 183 ಅಭ್ಯರ್ಥಿಗಳ ಪೈಕಿ ನಾಲ್ವರು ಮಹಿಳೆಯರಲ್ಲಿ ಒಬ್ಬರಾಗಿದ್ದಾರೆ.
ಬಳಿಕ, ಎನ್ಡಿಪಿಪಿಯವರೇ ಆಗಿರುವ ಇನ್ನೋರ್ವ ಮಹಿಳಾ ಅಭ್ಯರ್ಥಿ ಸಳೌಟೂನು ಕ್ರೂಸೆ ವೆಸ್ಟರ್ನ್ ಅಂಗಮಿ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿ ಕೆನೈಝಾಕೊ ನಖ್ರೊ ಅವರನ್ನು ಕೇವಲ ಏಳು ಮತಗಳ ಅಂತರದಿಂದ ಸೋಲಿಸಿದರು.