ಶಾರೂಖ್ ನಿವಾಸಕ್ಕೆ ಅಕ್ರಮ ಪ್ರವೇಶ: ಇಬ್ಬರ ಬಂಧನ

Update: 2023-03-03 04:28 GMT

ಮುಂಬೈ: ಖ್ಯಾತ ನಟ ಶಾರೂಖ್‌ಖಾನ್ ನಿವಾಸದ ಆವರಣಕ್ಕೆ ಅಕ್ರಮವಾಗಿ ಪ್ರವೇಶಿಸಿದ ಆರೋಪದಲ್ಲಿ ಗುಜರಾತ್ ನ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಮನ್ನತ್ ಆವರಣಕ್ಕೆ ಇಬ್ಬರು ಅಕ್ರಮವಾಗಿ ಪ್ರವೇಶಿಸಿದ್ದನ್ನು ಭದ್ರತಾ ಸಿಬ್ಬಂದಿ ಪತ್ತೆ ಮಾಡಿದ್ದರು.

ಸುಮಾರು 20 ವರ್ಷ ವಯಸ್ಸಿನ ಇಬ್ಬರನ್ನು ಭದ್ರತಾ ಸಿಬ್ಬಂದಿ ಕಟ್ಟಡದ ಒಳಗೆ ಪತ್ತೆ ಮಾಡಿ ನಿರ್ಬಂಧಿಸಿದರು. ಈ ಸಿಬ್ಬಂದಿ ವ್ಯಕ್ತಿಗಳನ್ನು ಹಿಡಿದು ವಿಚಾರಣೆ ನಡೆಸಿ ನಮಗೆ ಮಾಹಿತಿ ನೀಡಿದರು. ಇಬ್ಬರ ಬಂಧನಕ್ಕೆ ತಕ್ಷಣ ತಂಡವನ್ನು ಕಳುಹಿಸಿಕೊಟ್ಟಿದ್ದಾಗಿ ಬಾಂದ್ರಾ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಸುಧೀರ್ಘ ವಿಚಾರಣೆ ನಡೆಸಿ ಇಬ್ಬರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಇಬ್ಬರೂ ಶಾರೂಖ್ ಅವರ ಅಭಿಮಾನಿಗಳಾಗಿದ್ದು, ಖಾನ್ ಅವರ ನಿಕಟ ಸಾಮೀಪ್ಯ ಬಯಸಿದ್ದರು. ಇದರಲ್ಲಿ ಯಾವುದೇ ದುರುದ್ದೇಶ ಮೇಲ್ನೋಟಕ್ಕೆ ಕಂಡುಬಂದಿಲ್ಲ. ಇವರ ಕುಟುಂಬಗಳ ಸಂಪರ್ಕ ವಿವರಗಳನ್ನು ಪಡೆದು ಕರೆ ಮಾಡಿ ಮಾಹಿತಿ ನೀಡಿದ್ದೇವೆ. ಇವರು ಯಾವುದೇ ಬಗೆಯ ಅಪರಾಧ ನಂಟು ಹೊಂದಿದ್ದಾರೆಯೇ ಎಂಬ ಬಗ್ಗೆ ಗುಜರಾತ್ ಪೊಲೀಸರ ಜತೆ ಚರ್ಚಿಸಲಾಗುತ್ತಿದೆ. ಅವರು ಮುಂಬೈಗೆ ಆಗಮಿಸಿದ ಬಗ್ಗೆ ಮತ್ತು ಅವರ ಚಲನ ವಲನಗಳನ್ನು ಹಾಗೂ ಅವರ ಹೇಳಿಕೆಯನ್ನು ದೃಢೀಕರಿಸಲಾಗುತ್ತಿದೆ ಎಂದು ವಿವರ ನೀಡಿದ್ದಾರೆ.

Similar News