ಸಂಪತ್ತಿಗಾಗಿ ದುರಾಸೆಯಿಂದ ಭ್ರಷ್ಟಾಚಾರ ಕ್ಯಾನ್ಸರ್‌ ರೀತಿ ಹರಡುತ್ತಿದೆ: ಸುಪ್ರೀಂ ಕೋರ್ಟ್‌

Update: 2023-03-03 12:48 GMT

ಹೊಸದಿಲ್ಲಿ:ಸಂಪತ್ತಿಗಾಗಿ ತೀರದ ದಾಹವು ಭ್ರಷ್ಟಾಚಾರ (Corruption) ಕ್ಯಾನ್ಸರ್‌ (Cancer) ರೀತಿ ಹರಡಲು ಕಾರಣವಾಗಿದೆ ಹಾಗೂ ಭ್ರಷ್ಟಾಚಾರಕ್ಕೆ ಶೂನ್ಯ ಸಹಿಷ್ಣುತೆ ಮೂಲಕ ಹಾಗೂ ಭ್ರಷ್ಟರ ವಿರುದ್ಧ ಕಠಿಣ ಕ್ರಮಕ್ಕೆ ಆದೇಶಿಸುವ ಮೂಲಕ ನ್ಯಾಯಾಲಯಗಳು ಜನರ ಹಿತಾಸಕ್ತಿ ಕಾಯುವ ಜವಾಬ್ದಾರಿ ಹೊಂದಿವೆ," ಎಂದು  ನ್ಯಾಯಮೂರ್ತಿಗಳಾದ ಎಸ್‌ ರವೀಂದ್ರ ಭಟ್‌ ಮತ್ತು ದೀಪಾಂಕರ್‌ ದತ್ತ ಅವರ ಪೀಠ ಹೇಳಿದೆ.

ಅಕ್ರಮ ಆಸ್ತಿ ಪ್ರಕರಣದಲ್ಲಿ ಛತ್ತೀಸಗಢದ ಮಾಜಿ ಮುಖ್ಯ ಕಾರ್ಯದರ್ಶಿ ಅಮನ್‌ ಸಿಂಗ್‌ ಮತ್ತವರ ಪತ್ನಿ ವಿರುದ್ಧದ ಎಫ್‌ಐಆರ್‌ ರದ್ದುಗೊಳಿಸಿದ ಛತ್ತೀಸಗಢ ಹೈಕೋರ್ಟ್‌ ಆದೇಶವನ್ನು ಬದಿಗೆ ಸರಿಸಿ ಸುಪ್ರೀಂ ಕೋರ್ಟ್‌ (Supreme Court) ಮೇಲಿನಂತೆ ಹೇಳಿದೆ.

ಭ್ರಷ್ಟಾಚಾರ ಒಂದು ರೋಗವಾಗಿದೆ ಹಾಗೂ ಜೀವನದ ಪ್ರತಿ ಹಂತದಲ್ಲೂ ಹಾಸುಕೊಕ್ಕಾಗಿದೆ. ಎಂದು ನ್ಯಾಯಾಲಯ ಹೇಳಿದೆಯಲ್ಲದೆ  ಸಮಾಜದಲ್ಲಿ ನೈತಿಕ ಮೌಲ್ಯಗಳ ಅದಃಪತನದ ಬಗ್ಗೆಯೂ ಕಳವಳ ವ್ಯಕ್ತಪಡಿಸಿದೆ.

"ಭ್ರಷ್ಟಾಚಾರದ ಬೇರನ್ನು ಪತ್ತೆಹಚ್ಚಲು ಹೆಚ್ಚು ಕಷ್ಟವಿಲ್ಲ. ದುರಾಸೆ ಏಳು ಪಾಪಗಳಲ್ಲಿ ಒಂದು ಎಂದು ಹಿಂದು ಧರ್ಮದಲ್ಲಿ ಗುರುತಿಸಲ್ಪಟ್ಟಿದೆ ಆದರೆ ಈಗ ಈ ದುರಾಸೆ ಮಿತಿಮೀರಿದೆ, ಕಾನೂನು ಜಾರಿ ಸಂಸ್ಥೆಗಳ ಕಣ್ಣಿಗೆ ಮಣ್ಣೆರಚುವಲ್ಲಿ ಭ್ರಷ್ಟರು ಸಫಲರಾದರೆ, ಸಿಕ್ಕಿ ಬೀಳುವ ಭಯವೂ ಹೋಗುತ್ತದೆ ಮತ್ತು ಜನಸಾಮಾನ್ಯರಿಗೆ ಮಾತ್ರ ಕಾನೂನುಗಳೆಂಬ ಭಾವನೆ ಅವರಲ್ಲಿ ಬೆಳೆಯುತ್ತದೆ," ಎಂದು ನ್ಯಾಯಾಲಯ ಹೇಳಿದೆ.

ಇದನ್ನೂ ಓದಿ: ಈಜಿಪ್ಟ್ ನ ಗ್ರೇಟ್ ಪಿರಮಿಡ್ ನಲ್ಲಿ ರಹಸ್ಯ ಕೋಣೆ ಪತ್ತೆ

Similar News