×
Ad

ವಸುಂದರಾ ರಾಜೇ ಹುಟ್ಟುಹಬ್ಬದ ನಡುವೆಯೇ ಯುವ ಮೋರ್ಚಾದಿಂದ ಸರಕಾರದ ವಿರುದ್ದ ಪ್ರತಿಭಟನೆ

ಗೊಂದಲದಲ್ಲಿ ಬಿಜೆಪಿ ನಾಯಕರು

Update: 2023-03-04 12:49 IST

ಜೈಪುರ: ಈ ವರ್ಷಾಂತ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ರಾಜಸ್ಥಾನ ಸಜ್ಜಾಗುತ್ತಿದ್ದು, ಬಿಜೆಪಿ ಅಧಿಕಾರದ ಮೇಲಾಟಕ್ಕೆ ಮಾನಸಿಕವಾಗಿ ಸಿದ್ದವಾಗುತ್ತಿದೆ. ಒಂದೆಡೆ, ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಶನಿವಾರ ಚುರು ಜಿಲ್ಲೆಯ ಸಲಾಸರ್ ದೇವಸ್ಥಾನದಲ್ಲಿ ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸುತ್ತಿದ್ದಾರೆ. ಮತ್ತೊಂದೆಡೆ, ಬಿಜೆಪಿಯ ಯುವ ಘಟಕ, ಯುವ ಮೋರ್ಚಾ, ಪರೀಕ್ಷೆಯ ಪತ್ರಿಕೆ ಸೋರಿಕೆ ವಿಷಯದ ಕುರಿತು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ನಿವಾಸದ ಬಳಿ ಪ್ರತಿಭಟನೆ ನಡೆಸಲು ಮುಂದಾಗಿದೆ. ಈ ಎರಡು ಕಾರ್ಯಕ್ರಮ ಏಕಕಾಲದಲ್ಲಿ ಆರಂಭವಾಗಿದೆ.

ಪ್ರತಿಭಟನೆಯನ್ನು ಯಶಸ್ವಿಗೊಳಿಸುವಂತೆ ಎಲ್ಲ ಶಾಸಕರಿಗೆ ಮನವಿ ಮಾಡಲಾಗಿದೆ. ಅನೇಕ ಬಿಜೆಪಿ ನಾಯಕರು ಇದರಿಂದ ಗೊಂದಲಕ್ಕೆ ಒಳಗಾಗಿದ್ದಾರೆ.  ಅವರು ಪಕ್ಷದ ಕಾರ್ಯಕ್ರಮದೊಂದಿಗೆ ಇರಬೇಕೇ ಅಥವಾ  ಜನಪ್ರಿಯ ನಾಯಕಿ  ರಾಜೆ ಅವರ ಹುಟ್ಟುಹಬ್ಬದಲ್ಲಿ ಪಾಲ್ಗೊಳ್ಳಬೇಕೇ? ಎಂಬ ಗೊಂದಲದಲ್ಲಿದ್ದಾರೆ. ಈ ಘರ್ಷಣೆ ಬಿಜೆಪಿಯೊಳಗಿನ ಆಂತರಿಕ ಬಿಕ್ಕಟನ್ನು ಹೆಚ್ಚಿಸುತ್ತಿದೆ.

ರಾಜಸ್ಥಾನದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ವಸುಂಧರಾ ರಾಜೇ ಅವರ ಹುಟ್ಟುಹಬ್ಬದ ಸಂಭ್ರಮಾಚರಣೆಯನ್ನು ನಡೆಸಲಾಗುತ್ತಿದೆ. ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ರಾಜೇ   ಈಗಲೂ ಬಿಜೆಪಿಯೊಳಗೆ ಜನಪ್ರಿಯ ವ್ಯಕ್ತಿಯಾಗಿದ್ದಾರೆ. ಈ ಚುನಾವಣೆಯಲ್ಲಿ ಮುಖ್ಯಮಂತ್ರಿಯ ಅಭ್ಯರ್ಥಿಯನ್ನು ಬಿಂಬಿಸದಿರಲು ಪಕ್ಷವು ನಿರ್ಧರಿಸಿದೆಯಾದರೂ, ರಾಜೆ ಅವರ ಬೆಂಬಲಿಗರು ರಾಜೇ ಅವರನ್ನು ಹುದ್ದೆಗೆ ಸಂಭಾವ್ಯ ಅಭ್ಯರ್ಥಿಯಾಗಿ ನೋಡುತ್ತಿದ್ದಾರೆ.

 ಹುಟ್ಟು ಹಬ್ಬ ಆಚರಣೆಯು ಶಕ್ತಿ ಪ್ರದರ್ಶನವಲ್ಲ. ಕಳೆದ 2 ವರ್ಷಗಳಿಂದ ರಾಜೇ ಅವರು ಪಕ್ಷದ ಕಾರ್ಯಕರ್ತರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.  ರಾಜೇ ರಾಷ್ಟ್ರೀಯ ಉಪಾಧ್ಯಕ್ಷೆಯಾಗಿದ್ದು, ಯುವ ಮತದಾರರನ್ನು ಸೆಳೆಯುತ್ತಿದ್ದಾರೆ. ಹೀಗಾಗಿ ಅವರು ತಮ್ಮ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ ಎಂದು ಸಂಸದ ರಾಹುಲ್ ಕಸ್ವಾನ್ ಹೇಳಿದ್ದಾರೆ.

Similar News