ದಿಲ್ಲಿ ಮದ್ಯ ಹಗರಣ: ಬಿಆರ್‌ಎಸ್ ನಾಯಕಿ ಕವಿತಾ ಆಪ್ತ ಅರುಣ್ ಪಿಳ್ಳೈ ಅವರನ್ನು ಬಂಧಿಸಿದ ಈಡಿ
Update: 2023-03-07 14:38 IST
ಹೊಸದಿಲ್ಲಿ: ದಿಲ್ಲಿ ಮದ್ಯ ನೀತಿ ಜಾರಿಯಲ್ಲಿನ ಹಗರಣಕ್ಕೆ ಸಂಬಂಧಿಸಿದಂತೆ ಹೈದರಾಬಾದ್ ಮೂಲದ ಉದ್ಯಮಿ ಅರುಣ್ ರಾಮಚಂದ್ರನ್ ಪಿಳ್ಳೈ ಅವರನ್ನು ಜಾರಿ ನಿರ್ದೇಶನಾಲಯ (ಈಡಿ) ಮಂಗಳವಾರ ಬಂಧಿಸಿದೆ.
ಅರುಣ್ ಪಿಳ್ಳೈ ಈ ಪ್ರಕರಣದಲ್ಲಿ ಆರೋಪಿಯಾಗಿದ್ದು, ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಪುತ್ರಿ ಕೆ. ಕವಿತಾ ಅವರೊಂದಿಗೆ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ಮದ್ಯದ ಕಂಪನಿಯಾದ ಇಂಡೋಸ್ಪಿರಿಟ್ಸ್‌ನಲ್ಲಿ ಶೇ. 65 ರಷ್ಟು ಪಾಲನ್ನು ಹೊಂದಿರುವ ಆರೋಪದಲ್ಲಿ ಕೆ. ಕವಿತಾ ಅವರನ್ನು ಈಡಿ ಆರೋಪಪಟ್ಟಿಯಲ್ಲಿ ಹೆಸರಿಸಿತ್ತು. ಡಿಸೆಂಬರ್ 11, 2022 ರಂದು ಹೈದರಾಬಾದ್‌ನಲ್ಲಿರುವ ಕವಿತಾರ ಮನೆಯಲ್ಲಿ ತನಿಖಾ ಸಂಸ್ಥೆ ಪ್ರಶ್ನಿಸಿತು.