ಗುಜರಾತ್ ಬಳಿ 425 ಕೋ.ರೂ. ಮೌಲ್ಯದ ಡ್ರಗ್ಸ್ ಸಹಿತ ಇರಾನ್ ಬೋಟ್:‌ ಐವರು ವಶಕ್ಕೆ

Update: 2023-03-07 16:35 GMT

ಅಹ್ಮದಾಬಾದ್,ಮಾ.7: ಭಾರತೀಯ ತಟರಕ್ಷಣಾ ಪಡೆ (ಐಸಿಜಿ)ಯು ಸೋಮವಾರ ಗುಜರಾತ ಕರಾವಳಿಯಾಚೆ 425 ಕೋ.ರೂ. ಮೌಲ್ಯದ 61 ಕೆ.ಜಿ.ಮಾದಕ ದ್ರವ್ಯಗಳನ್ನು ಸಾಗಿಸುತ್ತಿದ್ದ ಇರಾನ್ ಬೋಟ್‌ ನೊಂದಿಗೆ ವಶಪಡಿಸಿಕೊಂಡಿದ್ದು, ಅದರಲ್ಲಿದ್ದ ಐವರು ಸಿಬ್ಬಂದಿಗಳನ್ನು ಬಂಧಿಸಿದೆ. ಗುಜರಾತ್ ಭಯೋತ್ಪಾದನೆ ನಿಗ್ರಹ ದಳ (ಎಟಿಎಸ್) ನೀಡಿದ್ದ ಬೇಹು ಮಾಹಿತಿಯ ಮೇರೆಗೆ ಐಸಿಜಿ ತನ್ನ ಐಸಿಜಿಎಸ್ ಮೀರಾ ಬೆಹ್ನ್ ಮತ್ತು ಐಸಿಜಿಎಸ್ ಅಭೀಕ್ ಗಸ್ತು ಹಡಗುಗಳ ಮೂಲಕ ಕಾರ್ಯಾಚರಣೆಯನ್ನು ನಡೆಸಿತ್ತು ಎಂದು ಪಿಐಬಿ (ರಕ್ಷಣಾ ಘಟಕ) ತಿಳಿಸಿದೆ. ಬೋಟ್ ಮತ್ತು ಬಂಧಿತರನ್ನು ತನಿಖೆಗಾಗಿ ಓಖಾಗೆ ಕರೆತರಲಾಗಿದೆ.

ಕಳೆದ 18 ತಿಂಗಳುಗಳ ಅವಧಿಯಲ್ಲಿ ಐಸಿಜಿಯು ಎಟಿಎಸ್ ಸಮನ್ವಯದೊಂದಿಗೆ ಎಂಟು ವಿದೇಶಿ ಹಡಗುಗಳನ್ನು ಮತ್ತು 2,355 ಕೋ.ರೂ.ಮೌಲ್ಯದ 407 ಕೆ.ಜಿ.ಮಾದಕದ್ರವ್ಯಗಳನ್ನು ವಶಪಡಿಸಿಕೊಂಡಿದೆ ಎಂದು ಹೇಳಿಕೆಯು ತಿಳಿಸಿದೆ.

Similar News