×
Ad

ಸಮುದ್ರದಲ್ಲಿ ಮುಳುಗಿ ಮೀನುಗಾರ ಮೃತ್ಯು

Update: 2023-03-10 21:27 IST

ಕಾಪು: ಮೀನುಗಾರಿಕೆ ಮಾಡುತ್ತಿದ್ದ ಮೀನುಗಾರರೊಬ್ಬರು ಸಮುದ್ರದ ನೀರಿನ ಸೆಳತಕ್ಕೆ ಸಿಲುಕಿ ನೀರಿನಲ್ಲಿ ಕೊಚ್ಚಿಹೋಗಿ ಮೃತಪಟ್ಟ ಘಟನೆ ಉಳಿಯಾರಗೋಳಿ ಗ್ರಾಮದ ಯಾರ್ಡ್ ಬೀಚ್ ಬಳಿ ನಡೆದಿದೆ.

ಮೃತರನ್ನು ಉಳಿಯಾರಗೋಳಿಯ ಸಂತೋಷ (48) ಎಂದು ಗುರುತಿಸ ಲಾಗಿದೆ.

ಇವರು ಮಾ.8ರಂದು ಸಂಜೆ ತನ್ನ ಗೆಳೆಯ ಕಿಶೋರ್ ಜೊತೆ  ಮೀನುಗಾರಿಕೆ ಮಾಡುತಿದ್ದು, ಈ ವೇಳೆ ನೀರಿನ ಸೆಳತಕ್ಕೆ ಸಿಲುಕಿ ಸಂತೋಷ ಸಮುದ್ರದ ಅಲೆಯಲ್ಲಿ ಕೊಚ್ಚಿಹೋದರೆನ್ನಲಾಗಿದೆ. ಮಾ.9ರಂದು ಸಂಜೆ ವೇಳೆ ಅಲ್ಲೇ ಸಮೀಪ ಸಂತೋಷ್ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News