ಉದ್ಯೋಗಕ್ಕಾಗಿ ಭೂಮಿ ಪ್ರಕರಣ: ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಗೆ ಸಿಬಿಐ ಸಮನ್ಸ್

Update: 2023-03-11 08:08 GMT

ಪಾಟ್ನಾ: ಉದ್ಯೋಗಕ್ಕಾಗಿ ಭೂಮಿ ಪ್ರಕರಣದಲ್ಲಿ ಬಿಹಾರದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ (Tejashwi Yadav)ಅವರನ್ನು ಸಿಬಿಐ  ವಿಚಾರಣೆಗೆ ಕರೆದಿದೆ ಎಂದು NDTV ವರದಿ ಮಾಡಿದೆ.

ಮಾಜಿ ರೈಲ್ವೇ ಸಚಿವ ಲಾಲು ಪ್ರಸಾದ್ ಯಾದವ್ ಅವರ ಕಿರಿಯ ಪುತ್ರ ಯಾದವ್ ಅವರಿಗೆ ಈ ಹಿಂದೆ ಮಾರ್ಚ್ 4 ರಂದು ಸಿಬಿಐ ಸಮನ್ಸ್ ನೀಡಿತ್ತು.  ಆದರೆ ಅವರು ತನಿಖಾ ಸಂಸ್ಥೆಯ ಮುಂದೆ ಹಾಜರಾಗಿರಲಿಲ್ಲ. ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನಾಯಕನ ವಿರುದ್ಧ ಸಾಕ್ಷ್ಯಾಧಾರದ ಆಧಾರದ ಮೇಲೆ ಎರಡನೇ ಬಾರಿಗೆ ಸಿಬಿಐ ಸಮನ್ಸ್ ನೀಡಿದೆ.

ತಮ್ಮ ಪತ್ನಿಯ ಆರೋಗ್ಯದ ಕಾರಣ ತೇಜಸ್ವಿ ಯಾದವ್ ಸಿಬಿಐ ಮುಂದೆ ಹಾಜರಾಗುವುದಿಲ್ಲ. ಈಡಿ ದಾಳಿಯ ನಂತರ ನಿನ್ನೆ ದಿಲ್ಲಿಯ ಖಾಸಗಿ ಆಸ್ಪತ್ರೆಗೆ ಯಾದವ್ ಪತ್ನಿಯನ್ನು ದಾಖಲಿಸಲಾಗಿತ್ತು. ಅವರು ಗರ್ಭಿಣಿಯಾಗಿದ್ದು, ಹನ್ನೆರಡು ಗಂಟೆಗಳ ವಿಚಾರಣೆಯ ನಂತರ ಬಿಪಿ ಸಮಸ್ಯೆಯಿಂದಾಗಿ ಅವರು ಮೂರ್ಛೆ ಹೋಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

Similar News