×
Ad

ಮಧ್ಯಪ್ರದೇಶ: ಅತ್ಯಾಚಾರ ಆರೋಪಿಯ ಮನೆಯನ್ನು ನೆಲಸಮಗೊಳಿಸಿದ ಮಹಿಳಾ ಪೊಲೀಸರು

Update: 2023-03-11 12:13 IST

ಶಾದೋಲ್: ಬಾಲಕಿಯೊಬ್ಬಳ ಮೇಲಿನ ಸಾಮೂಹಿಕ ಅತ್ಯಾಚಾರ ಆರೋಪಿಯ 'ಅಕ್ರಮ' ಮನೆಯನ್ನು ನೆಲಸಮಗೊಳಿಸುವ ಕಾರ್ಯಾಚರಣೆಯಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿಗಳೇ ಪಾಲ್ಗೊಂಡಿದ್ದ ಘಟನೆ ರಾಜಧಾನಿ ಭೋಪಾಲ್‌ನಿಂದ 250 ಕಿಮೀ ದೂರವಿರುವ ಶಾದೋಲ್ ಜಿಲ್ಲೆಯಲ್ಲಿ ನಡೆದಿದೆ. ನೆಲಸಮ ಕಾರ್ಯಾಚರಣೆ ಸಂದರ್ಭದಲ್ಲಿ ಹಲವು ಮಹಿಳಾ ಪೊಲೀಸರು ಬುಲ್ಡೋಜರ್ ಏರಿ ಕುಳಿತಿದ್ದರು. 

ಬಾಲಕಿಯೊಬ್ಬಳ ಮೇಲೆ ನಡೆದಿದ್ದ ಸಾಮೂಹಿಕ ಅತ್ಯಾಚಾರದ ಆರೋಪಿಗಳ ಪೈಕಿ ಒಬ್ಬನಾದ ಕೌಶಲ್ ಕಿಶೋರ್ ಚೌಬೆಗೆ ಸೇರಿದ್ದೆನ್ನಲಾದ ಅಕ್ರಮ ಕಟ್ಟಡವನ್ನು ಮಹಿಳಾ ಪೊಲೀಸ್ ಸಿಬ್ಬಂದಿಗಳು ಬುಲ್ಡೋಜರ್ ನೆರವಿನಿಂದ ನೆಲಸಮಗೊಳಿಸಿದರು. ಆರೋಪಿ ಚೌಬೆ ಈ ಕಟ್ಟಡವನ್ನು ಸರ್ಕಾರಿ ಜಾಗವನ್ನು ಅತಿಕ್ರಮಿಸಿ ನಿರ್ಮಿಸಿದ್ದ ಎಂದು ಆರೋಪಿಸಲಾಗಿದೆ‌. ಸಾಮೂಹಿಕ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದ ನಂತರ ಪರಾರಿಯಾಗಿದ್ದ ಆರೋಪಿಗಳ ಪೈಕಿ ಚೌಬೆ ಕೂಡಾ ಒಬ್ಬನಾಗಿದ್ದ ಎಂದು ಹೇಳಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ರಾಣೆ ಪೊಲೀಸ್ ಠಾಣೆಯ ಠಾಣಾಧಿಕಾರಿ ಪಿ. ಕುರ್ಮಿ, "ಮೂವರು ಆರೋಪಿಗಳನ್ನು ಈ ಹಿಂದೆ ಬಂಧಿಸಲಾಗಿತ್ತು. ಕೌಶಲ್ ಕಿಶೋರ್ ಚೌಬೆಯನ್ನು ಶುಕ್ರವಾರ ಬಂಧಿಸಲಾಗಿದೆ" ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ​ತ್ರಿಪುರಾ: ಚುನಾವಣೋತ್ತರ ಹಿಂಸೆ ತನಿಖೆಗೆ ಆಗಮಿಸಿದ್ದ ಸಂಸದೀಯ ತಂಡದ ಮೇಲೆ ಹಲ್ಲೆ

Similar News