'RRR' ಚಿತ್ರವನ್ನು 'ಬಾಲಿವುಡ್‌ ಚಿತ್ರ' ಎಂದ ಆಸ್ಕರ್‌ ನಿರೂಪಕ: ತೆಲುಗರಿಂದ ಅಸಮಾಧಾನ

Update: 2023-03-13 08:35 GMT

ಹೊಸದಿಲ್ಲಿ: ʼನಾಟು ನಾಟುʼ ಹಾಡಿಗೆ ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಆಸ್ಕರ್‌ ಪ್ರಶಸ್ತಿ ಪಡೆದಿರುವ RRR ಚಿತ್ರದ ಬಗ್ಗೆ ಆಸ್ಕರ್‌ ನಿರೂಪಕ ಮಾಡಿದ ತಪ್ಪಾದ ಉಲ್ಲೇಖವು ತೆಲುಗರ ಅಸಮಾಧಾನಕ್ಕೆ ಕಾರಣವಾಗಿದೆ. 

ಆರ್‌ಆರ್‌ಆರ್‌ ಚಿತ್ರದ ಗೀತೆಗೆ ಆಸ್ಕರ್‌ ಬಂದಿರುವ ಬಗ್ಗೆ ಸಂಭ್ರಮ ವ್ಯಕ್ತಪಡಿಸುತ್ತಲೇ, ಚಿತ್ರವನ್ನು ʼಬಾಲಿವುಡ್‌ ಚಿತ್ರʼ ಎಂದು ತಪ್ಪಾಗಿ ಗುರುತಿಸಿದ್ದರ ಬಗ್ಗೆ ಆಸ್ಕರ್ 2023ರ ನಿರೂಪಕ ಜಿಮ್ಮಿ ಕಿಮ್ಮೆಲ್ ಅವರ ವಿರುದ್ಧ ತೆಲುಗು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.   

ಪ್ರಪಂಚದಾದ್ಯಂತ ಲಕ್ಷಾಂತರ ಜನರ ಹೃದಯಗಳನ್ನು ಗೆದ್ದಿರುವ ಚಲನಚಿತ್ರದ ಮೂಲಗಳನ್ನು ತಿಳಿಯದೆ ಅಕಾಡೆಮಿಯು ಹೇಗೆ ನಿರ್ಲಕ್ಷ್ಯ ವಹಿಸುತ್ತದೆ ಎಂದು ಕೆಲವು ನೆಟ್ಟಿಗರು ಪ್ರಶ್ನಿಸಿದ್ದಾರೆ. ಈ ಬಗ್ಗೆ ಇದುವರೆಗೆ ಚಿತ್ರತಂಡವಾಗಲೀ, ಆಸ್ಕರ್‌ ಮೂಲಗಳಾಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಇದನ್ನೂ ಓದಿ: ಆಸ್ಕರ್‌ 2023: 'Everything Everywhere All at Once' ಚಿತ್ರಕ್ಕೆ ಏಳು ವಿಭಾಗಗಳಲ್ಲಿ ಪ್ರಶಸ್ತಿ

Similar News