×
Ad

ಉಡುಪಿ: ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ವಂಚನೆ

Update: 2023-03-14 21:12 IST

ಉಡುಪಿ, ಮಾ.14: ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಆನ್ ಲೈನ್ ಮೂಲಕ ಲಕ್ಷಾಂತರ ರೂ. ಹಣ ಮೋಸ ಮಾಡಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಯರಾಜ್ ಆಚಾರ್ಯ ವಿದೇಶದಲ್ಲಿ ಉದ್ಯೋಗಕ್ಕಾಗಿ ವಾಟ್ಸಾಪ್‌ನಲ್ಲಿ ಕಂಡು ಬಂದ ವೀಸಾ ಮಾಡಿಕೊಡುವ ಪ್ರಕಟಣೆಯನ್ನು ಓದಿ ಅದರಲ್ಲಿದ್ದ ಮೊಬೈಲ್ ನಂಬರ್‌ಗೆ ಕರೆ ಮಾಡಿದ್ದರು. ಬಳಿಕ ಅವರು ನಾವು ಪಾಸ್ ಪೋರ್ಟ್ ಮತ್ತು ವೀಸಾ ಮಾಡಿಕೊಡುವ ಏಜೆಂಟ್ ಎಂದು ಜಯರಾಜ್ ಆಚಾರ್ಯರನ್ನು ನಂಬಿಸಿದ್ದರು.

ಆನ್‌ಲೈನ್ ಮೂಲಕ ಸಂದರ್ಶನ ನಡೆಸಿ, ವಿಸಾ ಮಾಡಿಸಲು ಶುಲ್ಕ ಮತ್ತು ಇನ್ನಿತರ ಖರ್ಚುಗಳ ನೆಪ ಹೇಳಿ, ಜ.9ರಿಂದ ಫೆ.8ರವರೆಗೆ ಒಟ್ಟು 6,90,343 ರೂ. ಹಣವನ್ನು ಜಯರಾಜ್ ಆಚಾರ್ಯರಿಂದ ವಿವಿಧ ಖಾತೆಗೆ ಆನ್‌ಲೈನ್ ಮೂಲಕ ವರ್ಗಾವಣೆ ಮಾಡಿಸಿಕೊಂಡು ಮೋಸ ಮಾಡಿರುವುದಾಗಿ ದೂರಲಾಗಿದೆ.

Similar News