ಪಾಕಿಸ್ತಾನ: ಅಧಿಕಾರಿಗಳು ಉಡುಗೊರೆ ಸ್ವೀಕರಿಸುವುದಕ್ಕೆ ಹೊಸ ನಿಯಮ

Update: 2023-03-14 18:12 GMT

ಇಸ್ಲಮಾಬಾದ್, ಅಧ್ಯಕ್ಷರು, ಪ್ರಧಾನಿ ಹಾಗೂ ಸಂಪುಟದ ಸದಸ್ಯರ ಸಹಿತ  ಚುನಾಯಿತ ಅಧಿಕಾರಿಗಳು 300 ಡಾಲರ್‌ಗಿಂತ ಹೆಚ್ಚಿನ ಮೌಲ್ಯದ ಉಡುಗೊರೆ ಸ್ವೀಕರಿಸುವುದನ್ನು ನಿಷೇಧಿಸಿ ಪಾಕಿಸ್ತಾನದ ಸರಕಾರ ಆದೇಶ ಜಾರಿಗೊಳಿಸಿದೆ ಎಂದು ಜಿಯೊ ನ್ಯೂಸ್ ಮಂಗಳವಾರ  ವರದಿ ಮಾಡಿದೆ.

ತೋಷಖಾನ ಪಾಲಿಸಿ 2023 ತಕ್ಷಣದಿಂದಲೇ ಜಾರಿಗೆ ಬರಲಿದೆ ಮತ್ತು ನ್ಯಾಯಾಧೀಶರು, ನಾಗರಿಕ ಮತ್ತು ಮಿಲಿಟರಿ ನಾಯಕರು ಕೂಡಾ ಈ ನಿಯಮದ ವ್ಯಾಪ್ತಿಗೆ ಬರುತ್ತಾರೆ. ಪ್ರಧಾನಿ, ಅಧ್ಯಕ್ಷ ಮತ್ತಿತರರು ವಿದೇಶಕ್ಕೆ ಭೇಟಿ ನೀಡಿದಾಗ ಅಥವಾ ವಿದೇಶದ ಗಣ್ಯರ ನಿಯೋಗ ದೇಶಕ್ಕೆ ಭೇಟಿ ನೀಡಿದಾಗ ಅವರು ನೀಡುವ ದುಬಾರಿ ಮತ್ತು ಅತ್ಯಮೂಲ್ಯ ಉಡುಗೊರೆಗಳು ತೋಷಖಾನಾ(ಖಜಾನೆ, ಭಂಡಾರ)ದ ಸೊತ್ತಾಗುತ್ತದೆ. ಅದನ್ನು ಆ ಅಧಿಕಾರಿಗಳು ಖಜಾನೆಗೆ ಅಲ್ಪ ಮೊತ್ತವನ್ನು ಪಾವತಿಸಿ, ರಿಯಾಯಿತಿ ದರದಲ್ಲಿ ತಮ್ಮಲ್ಲೇ ಉಳಿಸಿಕೊಳ್ಳಲು ಅವಕಾಶವಿತ್ತು. ಇದೀಗ ಹೊಸ ನಿಯಮದ ಪ್ರಕಾರ, ಲಕ್ಷಾಂತರ ಮೊತ್ತದ ನಗದು ಸ್ವೀಕಾರ, ಆಭರಣ, ಕಾರುಗಳು, ವಾಚುಗಳು ಹಾಗೂ ಇತರ ಬೆಲೆಬಾಳುವ ವಸ್ತುಗಳನ್ನು ಉಡುಗೊರೆಯಾಗಿ ಸ್ವೀಕರಿಸುವುದನ್ನೂ ನಿಷೇಧಿಸಲಾಗಿದೆ ಎಂದು ವರದಿ ಹೇಳಿದೆ.

Similar News