ಕಪ್ಪು ಸಮುದ್ರದ ಮೇಲೆ‌ ಅಮೆರಿಕದ ಡ್ರೋನ್‌ಗೆ ಢಿಕ್ಕಿ ಹೊಡೆದ ರಷ್ಯಾ ಜೆಟ್: ಈವರೆಗಿನ ಮಾಹಿತಿ ಹೀಗಿದೆ...

Update: 2023-03-15 06:50 GMT

ವಾಷಿಂಗ್ಟನ್: ರಷ್ಯಾದ ಸುಖೋಯ್-27 (Russia Jet) ಯುದ್ಧ ವಿಮಾನವೊಂದು ಕಪ್ಪು ಸಮುದ್ರದ ಮೇಲೆ ಹಾರಾಡುತ್ತಿದ್ದ ಅಮೆರಿಕಾದ ಎಂಕ್ಯೂ-9 ರೀಪರ್ ಡ್ರೋನ್ (US Drone) ಮೇಲೆ ಇಂಧನ ಸುರಿದು ನಂತರ ಅದಕ್ಕೆ ಢಿಕ್ಕಿ ಹೊಡೆಯುವ ಮೂಲಕ ಅದನ್ನು ಪತನಗೊಳಿಸಿದೆ ಎಂದು ndtv.com ವರದಿ ಮಾಡಿದೆ.

ಈ ಕೃತ್ಯವನ್ನು "ಅಜಾಗರೂಕ" ಎಂದು ಬಣ್ಣಿಸಿರುವ ಅಮೆರಿಕಾ ಸೇನೆಯು, "ಡಿಕ್ಕಿ ಹೊಡೆಯುವ ಮುನ್ನ ಹಲವಾರು ಬಾರಿ ಸುಖೋಯ್-27 ಯುದ್ಧ ವಿಮಾನವು ಎಂಕ್ಯೂ-9 ಡ್ರೋನ್ ಮೇಲೆ ಅಜಾಗರೂಕ, ಪರಿಸರಕ್ಕೆ ಹಾನಿಕಾರಕ ಹಾಗೂ ವೃತ್ತಿಪರವಲ್ಲದ ರೀತಿಯಲ್ಲಿ ಇಂಧನ ಸುರಿದು, ಅದರ ಸುತ್ತ ಸುತ್ತಾಡಿದ ನಂತರ ಢಿಕ್ಕಿ ಹೊಡೆದು ಪತನಗೊಳಿಸಿದೆ" ಎಂದು ಆರೋಪಿಸಿದೆ.

ಆದರೆ, ಈ ಆರೋಪವನ್ನು ಅಲ್ಲಗಳೆದಿರುವ ರಷ್ಯಾ ರಕ್ಷಣಾ ಸಚಿವಾಲಯವು, "ತೀಕ್ಷ್ಣ ಕೌಶಲ ಹೊಂದಿರುವ ಅನಾಮಿಕ ವಾಯು ಮಾರ್ಗದ ವಾಹನ ಎಂಕ್ಯೂ-9 ಡ್ರೋಣ್, ದಿಕ್ಕಿನ ನಿಯಂತ್ರಣವಿಲ್ಲದೆ ಚಾಲಕರಹಿತ ಯುದ್ಧವಿಮಾನದ ಒಳ ಪ್ರವೇಶಿಸಿದ್ದರಿಂದ ಸಮುದ್ರದ ನೀರಿನ ಮೇಲ್ಪದರಕ್ಕೆ ಢಿಕ್ಕಿ ಹೊಡೆಯಿತು" ಎಂದು ಸ್ಪಷ್ಟನೆ ನೀಡಿದೆ.

ಈ ನಡುವೆ ಅಮೆರಿಕಾ ವಿದೇಶಾಂಗ ಇಲಾಖೆಯು ರಷ್ಯಾದ ರಾಯಭಾರಿ ಅನತೊಲಿ ಆ್ಯಂಟನೋವ್ ಅವರಿಗೆ ಯೂರೋಪ್ ದೇಶಗಳ ಸಹಾಯಕ ಕಾರ್ಯದರ್ಶಿ ಕೇರೆನ್ ಡಾನ್‌ಫ್ರೈಡ್ ಅವರೊಂದಿಗಿನ ಸಭೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಆ್ಯಂಟನೋವ್, "ನಮ್ಮ ಮಟ್ಟಿಗೆ ಅಮೆರಿಕಾ ಹಾಗೂ ರಷ್ಯಾ ನಡುವೆ ಯಾವುದೇ ಬಗೆಯ ಸಂಘರ್ಷ ಉದ್ಭವಿಸುವುದು ಬೇಕಿಲ್ಲ" ಎಂದಿದ್ದಾರೆ.

ಶ್ವೇತಭವನದ ರಾಷ್ಟ್ರೀಯ ಭದ್ರತಾ ವಕ್ತಾರ ಜಾನ್ ಕಿರ್ಬಿ, ಅಮೆರಿಕಾವು ರಷ್ಯಾದ ನಿರಾಕರಣೆಯನ್ನು ಖಚಿತವಾಗಿ ನಿರಾಕರಿಸುತ್ತದೆ. ಅಲ್ಲದೆ ಅಮೆರಿಕಾವು ಪತನಗೊಂಡಿರುವ ಡ್ರೋನ್ ಅನ್ನು ವಶಪಡಿಸಿಕೊಳ್ಳಲು ಯತ್ನಿಸಲಿದೆ ಎಂದು ಹೇಳಿದ್ದು, "ಹೆಚ್ಚಿನ ವಿವರಗಳ ಆಳಕ್ಕೆ ಇಳಿಯದೆ, ನಾವು ಆ ನಿರ್ದಿಷ್ಟ ಡ್ರೋನ್ ಹಾಗೂ ವಿಮಾನಕ್ಕೆ ಸಂಬಂಧಿಸಿದಂತೆ ನಮ್ಮ ಸಮಾನ ಪಾಲನ್ನು ರಕ್ಷಿಸಿಕೊಳ್ಳಲು ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ಹೇಳಲು ಬಯಸುತ್ತೇನೆ" ಎಂದು ತಿಳಿಸಿದ್ದಾರೆ ಎಂದು CNN ಸುದ್ದಿ ಸಂಸ್ಥೆ ವರದಿ ಮಾಡಿದೆ.

"ಅನಾಮಿಕ ಅಮೆರಿಕಾ ಡ್ರೋನ್ ಪತನಕ್ಕೆ ಕಾರಣವಾದ ಅಸುರಕ್ಷಿತ, ವೃತ್ತಿಪರವಲ್ಲದ ಛೇದಕದ ಕುರಿತು ನಮ್ಮ ಪ್ರಬಲ ಆಕ್ಷೇಪಣೆಯನ್ನು ಮಂಡಿಸಲು ಮತ್ತೆ ರಷ್ಯಾದೊಂದಿಗೆ ಉನ್ನತ ಮಟ್ಟದಲ್ಲಿ ನೇರ ಮಾತುಕತೆ ನಡೆಸಲಿದ್ದೇವೆ" ಎಂದು ಅಮೆರಿಕಾ ವಿದೇಶಾಂಗ ಇಲಾಖೆಯ ವಕ್ತಾರ ನೆಡ್ ಪ್ರೈಸ್ ಹೇಳಿದ್ದಾರೆ.

ಇದನ್ನೂ ಓದಿ: ಉದ್ಯೋಗಕ್ಕಾಗಿ ಭೂಮಿ ಪ್ರಕರಣ:  ಲಾಲು ಪ್ರಸಾದ್, ರಾಬ್ರಿ ದೇವಿ, ಮಿಸಾ ಭಾರ್ತಿಗೆ ಜಾಮೀನು

Similar News