×
Ad

ಮಾ.18ರಂದು ಕಾರ್ಕಳ ಸಾಣೂರು ಉರೂಸ್

Update: 2023-03-15 12:36 IST

ಕಾರ್ಕಳ, ಮಾ.15: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಸಾಣೂರಿನಲ್ಲಿ ಅಂತ್ಯ ವಿಶ್ರಮಗೊಂಡಿರುವ ಹಝ್ರತ್ ಅಸ್ಸೈಯದ್ ಶಾಹುಲ್ ಹಮೀದ್ ವಲಿಯುಲ್ಲಾರವರ ಉರೂಸ್ ಸಮಾರಂಭವು ಮಾ.18ರಂದು ನಡೆಯಲಿದೆ.

ಮಗ್ರಿಬ್ ನಮಾಝ್ ನಂತರ ನಡೆಯುವ ಕಾರ್ಯಕ್ರಮದ ನೇತೃತ್ವವನ್ನು ಉಡುಪಿ-ಚಿಕ್ಕಮಗಳೂರು ಸಂಯುಕ್ತ ಖಾಝಿ ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ವಹಿಸಲಿದ್ದು, ಕಾರ್ಯಕ್ರಮವನ್ನು ಬಂಗ್ಲೆಗುಡ್ಡೆಯ ತ್ವೈಬಾ ಗಾರ್ಡನ್ ಪ್ರಾಂಶುಪಾಲ ಅಹ್ಮದ್ ಶರೀಫ್ ಸಅದಿ ಅಲ್ ಖಾಮಿಲ್ ಕಿಲ್ಲೂರು ನೆರವೇರಿಸಲಿದ್ದಾರೆ

ಸೈಯದ್ ಅಬೂಬಕರ್ ಸಿದ್ದೀಕ್ ತಂಙಳ್ ಹಾದಿ ಮದನಿ ಮುರ ತೀರ್ಥಹಳ್ಳಿ ದುವಾಶೀರ್ವಚನ ನೀಡಲಿದ್ದು, ಖ್ಯಾತ ವಾಗ್ಮಿ ಹಾಫಿಳ್ ಸಿರಾಜುದ್ದೀನ್ ಖಾಸಿಮಿ ಪತ್ತಣಾಪುರಂ ಕೇರಳ ಮುಖ್ಯ ಭಾಷಣ ಮಾಡಲಿದ್ದಾರೆ. ಮುಹಿಯುದ್ದೀನ್ ಜುಮಾ ಮಸೀದಿ  ಹಾಗೂ ಸಾಣೂರು ದರ್ಗಾ ಶರೀಫ್ ಅಧ್ಯಕ್ಷ ಐಡಿಯಲ್ ಅಬ್ದುಲ್ ರಹಿಮಾನ್ ಅಧ್ಯಕ್ಷತೆ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಬಿ.ಎಂ.ಫಾರೂಖ್, ಮಾಜಿ ಶಾಸಕ ಬಿ.ಎ.ಮೊಯ್ದಿನ್ ಬಾವ, ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಬಿ.ಎ.ಅಬ್ದುಲ್ ನಾಸಿರ್ ಲಕ್ಕಿಸ್ಟಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ, ಉದ್ಯಮಿಗಳಾದ ಅಬ್ದುಲ್ಲತೀಫ್ ಗುರಪುರ, ಬಿ.ಎಂ.ಮಾಮ್ತಾಝ್ ಅಲಿ, ಡಾ.ಅಬ್ದುಲ್ ರವೂಫ್ ಸುಲ್ತಾನ್ ಗೋಲ್ಡ್ ಹಾಗೂ ವಿವಿಧ ಮಸೀದಿ ಮದ್ರಸ, ಸಂಘಟನೆಗಳ ನೇತಾರರು ಉಲಮಾ ಉಮರಾಗಳು ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Similar News