ಮಾ.16ರಂದು ಮಂಗಳೂರಿನಲ್ಲಿ ಸರಕಾರಿ ಬಸ್ ವ್ಯತ್ಯಯ
Update: 2023-03-15 20:55 IST
ಮಂಗಳೂರು, ಮಾ. 15: ನಗರದ ಕರಾವಳಿ ಉತ್ಸವ ಮೈದಾನದಲ್ಲಿ ಮಾ.16ರಂದು ನಡೆಯುವ ಸರಕಾರಿ ಫಲಾನುಭವಿಗಳ ಸಮಾವೇಶಕ್ಕೆ ಆಗಮಿಸುವ ಫಲಾನುಭವಿಗಳನ್ನು ಕರೆತರಲು ಸರಕಾರಿ ಬಸ್‌ಗಳನ್ನು ಬಳಸಲಿರುವುದರಿಂದ ಮಾ.16ರಂದು ಮಂಗಳೂರು/ಸ್ಟೇಟ್‌ಬ್ಯಾಂಕ್-ಧರ್ಮಸ್ಥಳ/ಉಪ್ಪಿನಂಗಡಿ/ಸುಬ್ರಹ್ಮಣ್ಯ/ಕಾಸರಗೋಡು ಮಾರ್ಗದ ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ.
ಹಾಗಾಗಿ ಸಾರ್ವಜನಿಕ-ಪ್ರಯಾಣಿಕರು ಸಹಕರಿಸುವಂತೆ ಕೆಎಸ್ಸಾರ್ಟಿಸಿ ಮಂಗಳೂರು ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿಯ ಪ್ರಕಟನೆ ತಿಳಿಸಿದೆ.