H3N2 ಸೋಂಕಿಗೆ ವೈದ್ಯ ವಿದ್ಯಾರ್ಥಿ, ವೃದ್ಧ ಬಲಿ

Update: 2023-03-16 06:35 GMT

ಮುಂಬೈ/ ನಾಗ್ಪುರ: ಅಹ್ಮದ್‌ನಗರದ 23 ವರ್ಷ ವಯಸ್ಸಿನ ವೈದ್ಯಕೀಯ ವಿದ್ಯಾರ್ಥಿಯೊಬ್ಬ ಎಚ್3ಎನ್2 ಮತ್ತು ಕೋವಿಡ್-19 ಸಾಂಕ್ರಾಮಿಕಕ್ಕೆ ಬಲಿಯಾಗಿದ್ದಾನೆ. ದೇಶದಲ್ಲಿ ಎರಡೂ ಸೋಂಕುಗಳು ತಗುಲಿದ ವ್ಯಕ್ತಿ ಮೃತಪಟ್ಟಿರುವ ಮೊದಲ ಪ್ರಕರಣ ಇದಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ದೃಢಪಡಿಸಿದ್ದಾರೆ.

ಬುಧವಾರ ಮಹಾರಾಷ್ಟ್ರದ ಆರೋಗ್ಯ ಇಲಾಖೆ ಎರಡು ಶಂಕಿತ ಇನ್ಫುಯೆನ್ಝಾ H3N2 ಸಂಬಂಧಿತ ಸಾವನ್ನು ವರದಿ ಮಾಡಿದೆ. ಇದರಲ್ಲಿ ವೈದ್ಯಕೀಯ ವಿದ್ಯಾರ್ಥಿ ಹಾಗೂ ನಾಗ್ಪುರದ 72 ವರ್ಷ ವಯಸ್ಸಿನ ವೃದ್ಧ ಸೇರಿದ್ದಾರೆ. ಕಳೆದ ವಾರ ಕೇಂದ್ರ ಆರೋಗ್ಯ ಸಚಿವಾಲಯ ಕರ್ನಾಟಕ ಮತ್ತು ಹರ್ಯಾಣದಲ್ಲಿ ಎಚ್3ಎನ್2 ಸಾವು ಸಂಭವಿಸಿದ್ದನ್ನು ಪ್ರಕಟಿಸಿತ್ತು.

ಮಹಾರಾಷ್ಟ್ರದಲ್ಲಿ ಜನವರಿಯಿಂದೀಚೆಗೆ ಇನ್‌ಫ್ಲುಯೆನ್ಝಾ ಸೋಂಕಿಗಾಗಿ ಸುಮಾರು 2.61 ಲಕ್ಷ ಮಂದಿಯ ಆರೋಗ್ಯ ತಪಾಸಣೆ ಮಾಡಲಾಗಿದೆ. ಈ ಪೈಕಿ 303 H1N1 ಪ್ರಕರಣಗಳು ಹಾಗೂ 58 H3N2 ಪ್ರಕರಣಗಳು ದೃಢಪಟ್ಟಿವೆ ಎಂದು ಆರೋಗ್ಯ ಸಚಿವ ತಾನಾಜಿ ಸಾವಂತ್ ವಿಧಾನಸಭೆಗೆ ತಿಳಿಸಿದ್ದಾರೆ.

Similar News