ಭಾರತದ ಪ್ರಜಾಪ್ರಭುತ್ವ ಕಾರ್ಯನಿರ್ವಹಿಸುತ್ತಿದ್ದರೆ ನನಗೆ ಸದನದಲ್ಲಿ ಮಾತಾಡಲು ಅವಕಾಶ ಸಿಗುತ್ತಿತ್ತು: ರಾಹುಲ್‌ ಗಾಂಧಿ

Update: 2023-03-16 12:52 GMT

ಹೊಸದಿಲ್ಲಿ: ಭಾರತದ ಪ್ರಜಾಪ್ರಭುತ್ವದ ಸ್ಥಿತಿಯ ಬಗ್ಗೆ ಲಂಡನ್‌ನಲ್ಲಿ ಕಳವಳ ವ್ಯಕ್ತಪಡಿಸಿರುವ ರಾಹುಲ್‌ ಗಾಂಧಿ ತಮ್ಮ ಮಾತುಗಳನ್ನು ಸಮರ್ಥಿಸಿದ್ದು, ತನಗೆ ಸಂಸತ್ತಿನಲ್ಲಿ ಮಾತನಾಡಲು ಅವಕಾಶ ಸಿಗುತ್ತಿಲ್ಲ ಎಂದು ಆರೋಪಿಸಿದ್ದಾರೆ. 

ವಿದೇಶದಲ್ಲಿ ದೇಶವನ್ನು ಅವಮಾನಿಸಿದ್ದಾರೆ ಎಂಬ ಬಿಜೆಪಿಯ ಆರೋಪದ ಕುರಿತು ಸಂಸತ್ತಿನಲ್ಲಿ ಮಾತನಾಡಲು ನನಗೆ ಅವಕಾಶ ಸಿಗುತ್ತದೆ ಎಂದು ನಾನು ʼಆಶಿಸುತ್ತೇನೆʼ ಎಂದು ಹೇಳಿದ ರಾಹುಲ್ ಗಾಂಧಿ ಹೇಳಿದ್ದಾರೆ. "ಆದರೆ ಅವರು ನನ್ನನ್ನು ಮಾತನಾಡಲು ಬಿಡುತ್ತಾರೆ ಎಂದು ನಾನು ಭಾವಿಸುವುದಿಲ್ಲ.” ಎಂದು ಅವರು ಹೇಳಿದ್ದಾರೆ.

ಲಂಡನ್‌ನಲ್ಲಿ ನೀಡಿದ ಹೇಳಿಕೆಗಳ ಬಳಿಕ ಗದ್ದಲವಾದ ನಂತರ ರಾಹುಲ್ ಗಾಂಧಿ ಮೊದಲ ಬಾರಿಗೆ ಲೋಕಸಭೆಗೆ ಹಾಜರಾಗಿದ್ದರು, ಕನಿಷ್ಠ ನಾಲ್ವರು ಕೇಂದ್ರ ಸಚಿವರು ಸಂಸತ್ತಿನ ಒಳಗೆ ಮತ್ತು ಹೊರಗೆ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದ್ದಾರೆ.

"ಇಂದು, ನಾನು ಸದನಕ್ಕೆ ಬಂದ ಒಂದು ನಿಮಿಷದಲ್ಲಿ, ಅವರು ಅದನ್ನು ಮುಂದೂಡಿದರು. ಸದನದಲ್ಲಿ ನನಗೆ ಸರಿ ಅನಿಸಿದ್ದನ್ನು ಹೇಳುವ ಆಲೋಚನೆಯೊಂದಿಗೆ ನಾನು ಸಂಸತ್ತಿಗೆ ಹೋಗಿದ್ದೇನೆ" ಎಂದು ಅವರು ಹೇಳಿದರು.

“ಭಾರತೀಯ ಪ್ರಜಾಪ್ರಭುತ್ವವು ಕಾರ್ಯನಿರ್ವಹಿಸುತ್ತಿದ್ದರೆ, ನಾನು ಸಂಸತ್ತಿನಲ್ಲಿ ನನ್ನ ಮಾತನ್ನು ಹೇಳಲು ಸಾಧ್ಯವಾಗುತ್ತಿತ್ತು, ನೀವು ನೋಡುತ್ತಿರುವುದು ಭಾರತೀಯ ಪ್ರಜಾಪ್ರಭುತ್ವ ಎದುರಿಸುತ್ತಿರುವ ಪರೀಕ್ಷೆಯಾಗಿದೆ, ನನ್ನ ವಿರುದ್ಧ ಆರೋಪ ಮಾಡಲು ಆ ನಾಲ್ವರು ಮಂತ್ರಿಗಳಿಗೆ ನೀಡಿದ ಅವಕಾಶವನ್ನು ಒಬ್ಬ ಸಂಸದರಿಗೆ ಕೊಡಲಾಗುವುದೇ?,'' ಎಂದು ರಾಹುಲ್‌ ಪ್ರಶ್ನಿಸಿದ್ದಾರೆ.

ಸದನದಲ್ಲಿ ಮಾತನಾಡಲು ಅನುಮತಿ ನೀಡುವ ಕುರಿತು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರೊಂದಿಗೆ ಮಾತನಾಡಿದ್ದೇನೆ ಎಂದು ಶ್ರೀ ಗಾಂಧಿ ಹೇಳಿದರು.

"ಸದನದ ನೆಲದ ಮೇಲೆ ಮಾತನಾಡುವುದು ನನ್ನ ಹಕ್ಕು. ಹಾಗಾಗಿ, ನಾನು ಸದನದಲ್ಲಿ ಮಾತನಾಡಲು ಸ್ಪೀಕರ್‌ಗೆ ಸಮಯ ಕೇಳಿದೆ. " ಆದರೆ ಸ್ಪೀಕರ್ ಬಿರ್ಲಾ ಅವರು ಮುಗುಳ್ನಕ್ಕು ಅಸಮ್ಮತಿ ಸೂಚಿಸಿದರು ಎಂದು ರಾಹುಲ್‌ ಹೇಳಿದ್ದಾರೆ.

ಅದಕ್ಕೂ ಮುನ್ನ ಎನ್‌ಡಿಟಿವಿಯೊಂದಿಗೆ ಮಾತನಾಡಿದ್ದ ರಾಹುಲ್ ಗಾಂಧಿ, ತಾನು ಯಾವುದೇ ಭಾರತ ವಿರೋಧಿ ಭಾಷಣ ಮಾಡಿಲ್ಲ ಎಂದು ಹೇಳಿದ್ದರು.

ತಾನು ವಿದೇಶಿ ನೆಲದಲ್ಲಿ ರಾಷ್ಟ್ರವನ್ನು ಅವಮಾನಿಸಿದ್ದಾರೆ ಎಂಬ ಬಿಜೆಪಿಯ ಆರೋಪದ ಬಗ್ಗೆ ಅವಕಾಶ ನೀಡಿದರೆ ನಾನು ಸದನದೊಳಗೆ ಮಾತನಾಡುತ್ತೇನೆ ಎಂದು ರಾಹುಲ್‌ ಹೇಳಿದ್ದರು.

Similar News