ಕ್ಷಮೆ ಕೇಳುವ ತನಕ ರಾಹುಲ್ ಗಾಂಧಿಗೆ ಸಂಸತ್ತಿನಲ್ಲಿ ಮಾತನಾಡಲು ಬಿಡದಿರಲು ಬಿಜೆಪಿ ನಿರ್ಧಾರ: ವರದಿ

Update: 2023-03-17 13:05 GMT

ಹೊಸದಿಲ್ಲಿ: ಲಂಡನ್ ನಲ್ಲಿ ಭಾರತೀಯ ಪ್ರಜಾಪ್ರಭುತ್ವದ ಕುರಿತು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ನೀಡಿದ ಹೇಳಿಕೆಗೆ ಕ್ಷಮೆಯಾಚಿಸುವವರೆಗೆ ಸದನದಲ್ಲಿ ಮಾತನಾಡಲು ಬಿಡುವುದಿಲ್ಲ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ನೀಡಿದ ಹೇಳಿಕೆಗೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಕ್ಷಮೆಯಾಚಿಸಬೇಕೆಂದು ಬಿಜೆಪಿ  ಒತ್ತಾಯಿಸಿದರೆ ವಿರೋಧ ಪಕ್ಷಗಳು ಅದಾನಿ-ಹಿಂಡೆನ್‌ಬರ್ಗ್ ವಿವಾದದ ಬಗ್ಗೆ ಜಂಟಿ ಸಂಸದೀಯ ಸಮಿತಿಯ ತನಿಖೆಗೆ ಒತ್ತಾಯಿಸಿ  ಗದ್ದಲ ನಡೆಸಿದವು. ಹೀಗಾಗಿ  ಸಂಸತ್ತಿನ ಎರಡೂ ಸದನಗಳನ್ನು ಇಂದು ಮತ್ತೆ ಮುಂದೂಡಲಾಯಿತು.

ತಮ್ಮ ಹೇಳಿಕೆಗೆ ಗದ್ದಲ ಭುಗಿಲೆದ್ದ ನಂತರ ಕುರಿತು ರಾಹುಲ್ ಗಾಂಧಿಯವರು ಇಂದು ಲೋಕಸಭೆಯಲ್ಲಿ 2ನೇ ಬಾರಿ ಕಾಣಿಸಿಕೊಂಡರು, ಆದರೆ ಯಾವುದೇ ಕಲಾಪ  ನಡೆಯದೆ ಸದನವನ್ನು ಮುಂದಿನ ವಾರಕ್ಕೆ ಮುಂದೂಡಲಾಯಿತು. ತಮ್ಮ ವಿರುದ್ಧದ ಆರೋಪಗಳಿಗೆ ಸದನದೊಳಗೆ ಉತ್ತರಿಸಲು ಬಯಸುವುದಾಗಿ ರಾಹುಲ್ ಗಾಂಧಿ ಹೇಳಿದ್ದಾರೆ, ಆದರೆ ಅವರು ಮೊದಲು ಕ್ಷಮೆಯಾಚಿಸಬೇಕೆಂದು ಬಿಜೆಪಿ ಹಠ ಹಿಡಿದಿದೆ.

Similar News