ರಾಜೀನಾಮೆ ನೀಡಿದ ಮುಖ್ಯಮಂತ್ರಿಯನ್ನು ಹೇಗೆ ಮರುಸ್ಥಾಪಿಸಬಹುದು?: ಉದ್ಧವ್‌ ನೇತೃತ್ವದ ಶಿವಸೇನೆಗೆ ಸುಪ್ರೀಂ ಪ್ರಶ್ನೆ

Update: 2023-03-17 12:08 GMT

ಹೊಸದಿಲ್ಲಿ: ಸದನದಲ್ಲಿ ವಿಶ್ವಾಸ ಮತ ಯಾಚಿಸದ ಮುಖ್ಯಮಂತ್ರಿಯನ್ನು ಹೇಗೆ ಆ ಹುದ್ದೆಯಲ್ಲಿ ಮರುಸ್ಥಾಪಿಸಬಹುದು ಎಂದು ಉದ್ಧವ್‌ ಠಾಕ್ರೆ ನೇತೃತ್ವದ ಶಿವಸೇನೆಗೆ ಸುಪ್ರೀಂ ಕೋರ್ಟ್‌ ಗುರುವಾರ ಪ್ರಶ್ನಿಸಿದೆ. ಶಿವಸೇನೆಯಲ್ಲಿ ಬಂಡಾಯದಿಂದಾಗಿ ಪಕ್ಷ ಇಬ್ಭಾಗವಾದ ನಂತರ ಮಹಾರಾಷ್ಟ್ರದಲ್ಲಿ ಉದ್ಭವಿಸಿದ ರಾಜಕೀಯ ಬಿಕ್ಕಟ್ಟಿಗೆ ಸಂಬಂಧಿಸಿದ ಹಲವಾರು ಅರ್ಜಿಗಳ ವಿಚಾರಣೆ ವೇಳೆ ನ್ಯಾಯಾಲಯ ಮೇಲಿನಂತೆ ಹೇಳಿದೆ.

"ನಿಮ್ಮ ಪ್ರಕಾರ ನಾವೇನು ಮಾಡಬೇಕು? ಪುನಃಸ್ಥಾಪಿಸಬೇಕೇ? ಆದರೆ ನೀವು ರಾಜೀನಾಮೆ ನೀಡಿದ್ದಿರಿ. ಹಾಗಿರುವಾಗ ರಾಜೀನಾಮೆ ನೀಡಿದ ಸರ್ಕಾರವನ್ನು ಪುನಃಸ್ಥಾಪಿಸುವಂತೆ ನೀವು ಕೋರ್ಟನ್ನು ಕೇಳಿದಂತಾಗಿದೆ," ಎಂದು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಅವರ ನೇತೃತ್ವದ ಸಂವಿಧಾನಿಕ ಪೀಠ ಗುರುವಾರ ಹೇಳಿದೆ.

ಇದಕ್ಕೂ ಮುಂಚೆ ಬುಧವಾರದ ವಿಚಾರಣೆ ವೇಳೆ ಪೀಠವು ರಾಜ್ಯಪಾಲರ ಕ್ರಮದ ಕುರಿತು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಗುರುವಾರದ ವಿಚಾರಣೆಯ ನಂತರ ನ್ಯಾಯಾಲಯ ತನ್ನ ತೀರ್ಪನ್ನು ಕಾಯ್ದಿರಿಸಿದೆ.

Similar News