ಮತದಾನ ಜಾಗೃತಿ ಕಿರುಚಿತ್ರ ಸ್ಪರ್ಧೆ: ಸಾಧನಾ ಕಟಪಾಡಿ ಪ್ರಥಮ

Update: 2023-03-18 15:42 GMT

ಉಡುಪಿ, ಮಾ.18: ಕರ್ನಾಟಕ ವಿಧಾನಸಭಾ ಚುನಾವಣೆ-2023ರ ಅಂಗವಾಗಿ ಸಾರ್ವಜನಿಕರಿಗೆ ಏರ್ಪಡಿಸ ಲಾದ ಮತದಾನ ಜಾಗೃತಿ ಕಿರುಚಿತ್ರ ನಿರ್ಮಾಣ ಸ್ಪರ್ಧೆಯಲ್ಲಿ ಸಾಧನಾ ಕಟಪಾಡಿ ಅವರ ನನ್ನ ಮತ ನನ್ನ ಹೆಮ್ಮೆ ಕಿರುಚಿತ್ರ ಪ್ರಥಮ ಸ್ಥಾನದೊಂದಿಗೆ 10,000 ರೂ. ನಗದು ಹಾಗೂ ಪ್ರಶಸ್ತಿ ಪತ್ರ ಪಡೆದುಕೊಂಡಿದೆ.

ಆದಿತ್ಯ ಅಂಬಲಪಾಡಿ ಅವರ ಓಟು=02 ಕಿರುಚಿತ್ರ ದ್ವಿತೀಯ ಸ್ಥಾನದೊಂದಿಗೆ 7,500ರೂ. ನಗದು ಹಾಗೂ ಪ್ರಶಸ್ತಿ ಪತ್ರ, ಕೆ.ಸತ್ಯೇಂದ್ರ ಪೈ ಅವರ ಮತದಾರ ಕಿರುಚಿತ್ರ ತೃತೀಯ ಸ್ಥಾನದೊಂದಿಗೆ 5,000 ರೂ ನಗದು ಹಾಗೂ ಪ್ರಶಸ್ತಿ ಪತ್ರ, ಸುಚಿತ್ರ ಎಸ್. ಅವರ ಮತ ಸಂಭ್ರಮ ಕಿರುಚಿತ್ರ ನಾಲ್ಕನೇ ಸ್ಥಾನದೊಂದಿಗೆ  2,000 ರೂ. ನಗದು ಹಾಗೂ ಪ್ರಶಸ್ತಿ ಪತ್ರ ಮತ್ತು ಸತೀಶ್ ಕಲ್ಯಾಣಪುರ ಅವರ ನಮ್ಮ ಓಟು ನಮ್ಮ ಪವರ್ ಕಿರುಚಿತ್ರವು ಐದನೇ ಸ್ಥಾನದೊಂದಿಗೆ 1,000 ರೂ. ನಗದು ಹಾಗೂ ಪ್ರಶಸ್ತಿ ಪತ್ರ ಪಡೆದಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

Similar News