ಕೇರಳದ ಮೊದಲ ತೃತೀಯ ಲಿಂಗಿ ನ್ಯಾಯವಾದಿ ಪದ್ಮಲಕ್ಷ್ಮಿ

Update: 2023-03-20 15:49 GMT

ತಿರುವನಂತಪುರ,ಮಾ.20: ಕೇರಳ ತನ್ನ ಮೊದಲ ತೃತೀಯ ಲಿಂಗಿ ನ್ಯಾಯವಾದಿಯನ್ನು ಪಡೆದಿದೆ. ತೃತೀಯ ಲಿಂಗಿ ಪದ್ಮಲಕ್ಷ್ಮಿ ಅವರು ರಾಜ್ಯದ ಬಾರ್ ಕೌನ್ಸಿಲ್ನಲ್ಲಿ ವಕೀಲರಾಗಿ ನೋಂದಾಯಿಸಿಕೊಂಡಿದ್ದಾರೆ.

ಪದ್ಮಲಕ್ಷ್ಮಿಯವರನ್ನು ಅಭಿನಂದಿಸಿರುವ ರಾಜ್ಯದ ಕೈಗಾರಿಕಾ ಸಚಿವ ಪಿ.ರಾಜೀವ್ ಅವರು ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅವರ ಭಾವಚಿತ್ರವನ್ನು ಶೇರ್ ಮಾಡಿಕೊಂಡಿದ್ದಾರೆ.

ರವಿವಾರ ಬಾರ್ ಕೌನ್ಸಿಲ್ ಆಫ್ ಇಂಡಿಯಾ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಾರ್ ನೋಂದಣಿ ಪ್ರಮಾಣಪತ್ರಗಳನ್ನು ಸ್ವೀಕರಿಸಿದ 1,500ಕ್ಕೂ ಅಧಿಕ ಕಾನೂನು ಪದವೀಧರರಲ್ಲಿ ಪದ್ಮಲಕ್ಷಿಯೂ ಸೇರಿದ್ದಾರೆ. ಅವರು ಎರ್ನಾಕುಲಂ ಸರಕಾರಿ ಕಾನೂನು ಕಾಲೇಜಿನಿಂದ ಕಾನೂನು ಪದವಿಯನ್ನು ಗಳಿಸಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ಪದ್ಮಲಕ್ಷಿಯವರಿಗೆ ಬಳಕೆದಾರರ ಅಭಿನಂದನೆಗಳು ಹರಿದುಬಂದಿವೆ.


2017ರಲ್ಲಿ ಜೋಯಿತಾ ಮಂಡಲ್ ಭಾರತದ ಪ್ರಥಮ ತೃತೀಯ ಲಿಂಗಿ ನ್ಯಾಯಾಧೀಶರಾಗುವ ಮೂಲಕ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಅವರು ಪ.ಬಂಗಾಳದ ಇಸ್ಲಾಮಪುರದಲ್ಲಿ ಲೋಕ್ ಅದಾಲತ್ನಲ್ಲಿ ನ್ಯಾಯಾಧೀಶೆಯಾಗಿ ನೇಮಕಗೊಂಡಿದ್ದರು. 2018ರಲ್ಲಿ ತೃತೀಯಲಿಂಗಿ ಕಾರ್ಯಕರ್ತೆ ವಿದ್ಯಾ ಕಾಂಬಳೆ ಅವರು ಮಹಾರಾಷ್ಟ್ರದ ನಾಗಪುರದಲ್ಲಿ ಲೋಕ್ ಅದಾಲತ್ನಲ್ಲಿ ಸದಸ್ಯ ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು.

ಅದೇ ವರ್ಷ ಗುವಾಹಟಿಯ ಸ್ವಾತಿ ಬಿಧಾನ ಬರುವಾ ಅವರ ರೂಪದಲ್ಲಿ ದೇಶವು ಮೂರನೇ ತೃತೀಯ ಲಿಂಗಿ ನ್ಯಾಯಾಧೀಶರನ್ನು ಪಡೆದಿತ್ತು.

Similar News